ಮುಂಬೈ :ದೇಶೀಯ ಷೇರು ಮಾರುಕಟ್ಟೆಗಳು ಬುಧವಾರದಂದು ನಕಾರಾತ್ಮಕವಾಗಿ ಕೊನೆಗೊಂಡಿವೆ. ಬೆಳಗ್ಗೆ ಋಣಾತ್ಮಕ ವಹಿವಾಟು ಪ್ರಾರಂಭಿಸಿದ ಸೂಚ್ಯಂಕಗಳು ಹಗಲಿನಲ್ಲಿ ಸ್ವಲ್ಪ ಚಂಚಲತೆ ತೋರಿಸಿದವು.
ಹೂಡಿಕೆದಾರರು ಅಲ್ಪಾವಧಿ ಲಾಭಕ್ಕೆ ಮೊರೆಹೋದರು ಮತ್ತು ಮತ್ತೆ ನಷ್ಟಕ್ಕೆ ಜಾರಿದರು. ಇಂಟ್ರಾಡೇ ಕನಿಷ್ಠ ಮಟ್ಟ ದಾಖಲಿಸಿದರು.
ಬೆಳಗ್ಗೆ 50,088 ಅಂಕಗಳಲ್ಲಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಗರಿಷ್ಠ 50,279 ಮತ್ತು ಕನಿಷ್ಠ 49,831 ಅಂಕಗಳಿಗೆ ತಲುಪಿದೆ. ಇದು ಅಂತಿಮವಾಗಿ 290 ಅಂಕಗಳ ನಷ್ಟದೊಂದಿಗೆ 49,902 ಅಂಕಗಳಲ್ಲಿ ಮುಕ್ತಾಯವಾಯಿತು.
ಇದೇ ಪ್ರವೃತ್ತಿಯನ್ನು ಮುಂದುವರೆಸಿದ ನಿಫ್ಟಿ 15,058 ಅಂಕಗಳಿಂದ ಪ್ರಾರಂಭವಾಗಿ 15,133-15,008 ಅಂಕಗಳ ನಡುವೆ ಸಾಗಿತು. ಅಂತಿಮವಾಗಿ 77 ಅಂಕಗಳ ನಷ್ಟದೊಂದಿಗೆ 15,030 ಅಂಗಳಲ್ಲಿ ಕೊನೆಗೊಂಡಿತು. ನಿನ್ನೆಯ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 73.15 ರೂ.ಯಷ್ಟಿತ್ತು.