ಮುಂಬೈ:ಸತತ ಎಂಟು ಸೆಷನ್‌ಗಳಲ್ಲೂ ಏರಿಕೆ ದಾಖಲಿಸಿದ್ದ ದೇಶೀಯ ಈಕ್ವಿಟಿ ಮಾರುಕಟ್ಟೆ, ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಆತ್ಮನಿರ್ಭರ ಭಾರತ 3.0 ಆರ್ಥಿಕ ಉತ್ತೇಜಕ ಪ್ಯಾಕೇಜ್ ಹೊರತಾಗಿ ಸೆನ್ಸೆಕ್ಸ್ ಕುಸಿಯಿತು.
ದಿನದ ವಹಿವಾಟು ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 236 ಅಂಕ ಇಳಿಕೆಯಾಗಿ 43,357 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 58 ಅಂಕ ಇಳಿಕೆಯಾಗಿ 12,691 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಸೆನ್ಸೆಕ್ಸ್ ವಿಭಾಗದಲ್ಲಿ ಎಸ್ಬಿಐ ಶೇ 3.16ರಷ್ಟು ಇಳಿಕೆ ಮುಖೇನ ಗರಿಷ್ಠ ಕುಸಿತ ದಾಖಲಿಸಿತು. ಕೊಟಾಕ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಒಎನ್‌ಜಿಸಿ ನಂತರದ ಸ್ಥಾನದಲ್ಲಿವೆ.