ಮುಂಬೈ:ಸಾಲದಾತ ಕೊಟಕ್ ಮಹೀಂದ್ರಾ ಬ್ಯಾಂಕ್ ತ್ರೈಮಾಸಿಕ ಗಳಿಕೆ ದಾಖಲಿಸಿದ ನಂತರ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಂದು 377 ಅಂಕ ಏರಿಕೆಯಾಗಿದೆ.
ಬಿಎಸ್‌ಇ ಸೂಚ್ಯಂಕವು 376.60 ಅಂಕ ಅಥವಾ ಶೇ 0.94ರಷ್ಟು ಏರಿಕೆ ಕಂಡು 40,522.10ಕ್ಕೆ ತಲುಪಿದರೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 121.65 ಅಂಕ ಅಥವಾ ಶೇ 1.03ರಷ್ಟು ಏರಿಕೆ ಕಂಡು 11,889.40 ಅಂಕಗಳ ಮಟ್ಟ ತಲುಪಿತು.
ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಾಲದಾತ ಕೊಟಕ್ ಮಹೀಂದ್ರಾ ಬ್ಯಾಂಕ್ನ ಒಟ್ಟು ನಿವ್ವಳ ಲಾಭದಲ್ಲಿ ಶೇ 22ರಷ್ಟು ಬೆಳವಣಿಗೆ ದಾಖಲಿಸಿ 2,947 ಕೋಟಿ ರೂ.ಗೆ ತಲುಪಿದೆ. ಈ ನಂತರ ಅದರ ಷೇರು ಮೌಲ್ಯದಲ್ಲಿ ಶೇ 12ರಷ್ಟು ಏರಿಕೆಯಾಗಿದೆ.
ಸಣ್ಣ ಪ್ರತಿಸ್ಪರ್ಧಿ ಇಂಡಸ್‌ಇಂಡ್ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳುವ ಬಗ್ಗೆ ಎದ್ದಿದ್ದ ಊಹಾಪೋಹಗಳನ್ನು ನಿರಾಕರಿಸಿದೆ. ಎಮ್ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ಪ್ರಕಾರ, ಸಾಲದ ಬೆಳವಣಿಗೆ ಕಡಿಮೆಗೊಳಿಸಿದರೂ ಕೊಟಕ್ ಬ್ಯಾಂಕ್ ಬಲವಾದ ಲಾಭದ ವರದಿ ಮಾಡಿದೆ. ಹೆಚ್ಚಿನ ಖಜಾನೆ ಲಾಭಗಳು (ಈಕ್ವಿಟಿ ಸೇರಿ) ಮತ್ತು ಒಳ ಬರುವ ಆಸ್ತಿ ಗುಣಮಟ್ಟದ ಒತ್ತಡಕ್ಕೆ ಇದು ಉತ್ತಮ ರಕ್ಷಣೆ ಎಂದು ಬ್ಯಾಂಕ್ ನಂಬಿದೆ ಎಂದು ಹೇಳಿದೆ.
ನೆಸ್ಲೆ ಇಂಡಿಯಾ, ಏಷ್ಯಾನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಎಲ್ & ಟಿ, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಆಟೋ ಇತರ ಷೇರುಗಳು ಲಾಭ ಗಳಿಸಿದವು. ಮತ್ತೊಂದೆಡೆ ಟಿಸಿಎಸ್, ಒಎನ್‌ಜಿಸಿ, ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಷೇರುಗಳ ಮೌಲ್ಯ ಇಳಿಕೆಯಾಯಿತು.