ಕರ್ನಾಟಕ

karnataka

ETV Bharat / business

8ನೇ ದಿನವೂ ಮುನ್ನುಗ್ಗಿದ ಗೂಳಿ: ಹೊಸ ವರ್ಷದಂದು ಹೊಸ ಎತ್ತರಕ್ಕೇರಿದ ಸೆನ್ಸೆಕ್ಸ್!

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಾರ್ವಕಾಲಿಕ ಗರಿಷ್ಠ 14,018.50 ತಲುಪಿದ್ದು, ಇದು ಹಿಂದಿನ ವಹಿವಾಟಿನ ಅಂತ್ಯಕ್ಕಿಂತ 36.75 ಅಂಕ ಹೆಚ್ಚಳವಾಯಿತು. ಮಧ್ಯಂತರ ವಹಿವಾಟಿನಂದು ನಿಫ್ಟಿ ದಾಖಲೆಯ ಗರಿಷ್ಠ ಮಟ್ಟವಾದ 14,049.85 ಅಂಕಗಳಿಗೆ ತಲುಪಿದರೆ, ಸೆನ್ಸೆಕ್ಸ್ 47,980.36 ಅಂಕಗಳಿಗೆ ಏರಿಕೆಯಾಯಿತು.

Sensex,
ಸೆನ್ಸೆಕ್ಸ್

By

Published : Jan 1, 2021, 7:01 PM IST

ಮುಂಬೈ: ಐಟಿ, ಆಟೋ ಮತ್ತು ಎಫ್‌ಎಂಸಿಜಿ ಷೇರುಗಳ ಖರೀದಿ ಭರಾಟೆಯಿಂದ ಹೊಸ ವರ್ಷದ ಮೊದಲ ದಿನದಂದು ದೇಶಿ ಪೇಟೆಯು ತನ್ನ ದಾಖಲೆಯ ಓಟ ಮುಂದುವರಿಸಿದೆ.

ಐದನೇ ದಿನವೂ ತನ್ನ ದಾಖಲೆಯ ಏರಿಕೆ ವಿಸ್ತರಿಸಿದ ಮುಂಬೈ ಸೆನ್ಸೆಕ್ಸ್ ಸೂಚ್ಯಂಕ 117.65 ಅಥವಾ ಶೇ 0.25ರಷ್ಟು ಏರಿಕೆಯಾಗಿ, ಜೀವಿತಾವಧಿಯ ಗರಿಷ್ಠ 47,868.98 ಅಂಕಗಳಿಗೆ ತಲುಪಿತು. ಈ ಹೆಚ್ಚಳದೊಂದಿಗೆ ಸತತ ಎಂಟನೇ ದಿನವೂ ಗೂಳಿ ಲಾಭ ಕಾಯ್ದುಕೊಂಡಿದೆ. ಡಿಸೆಂಬರ್ 22ರಿಂದ ಶೇ 5ರಷ್ಟು ಏರಿಕೆಯಾಗಿದೆ.

ಓದಿ:ಸಾಲದ ಸುಳಿಯಲ್ಲಿರುವ SAILಗೆ ಮೊದಲ ಮಹಿಳೆ ಸಾರಥಿ!: ಮೊಂಡಾಲ್‌ ಆಗುವರೇ 'ಉಕ್ಕಿ'ನ ಮಹಿಳೆ?

ನಿಫ್ಟಿ ಸಾರ್ವಕಾಲಿಕ ಗರಿಷ್ಠ 14,018.50 ತಲುಪಿದ್ದು, ಇದು ಹಿಂದಿನ ಅಂತ್ಯಕ್ಕಿಂತ 36.75 ಅಂಕ ಹೆಚ್ಚಳವಾಯಿತು. ಮಧ್ಯಂತರ ವಹಿವಾಟಿನಂದು ನಿಫ್ಟಿ ದಾಖಲೆಯ ಗರಿಷ್ಠ 14,049.85 ಅಂಕಗಳಿಗೆ ತಲುಪಿದರೆ, ಸೆನ್ಸೆಕ್ಸ್ 47,980.36 ಅಂಕಗಳಿಗೆ ಏರಿಕೆಯಾಯಿತು.

ಐಟಿಸಿ ಶೇ 2.32ರಷ್ಟು ಏರಿಕೆ ಕಂಡಿದೆ, ಈ ನಂತರದ ಸ್ಥಾನದಲ್ಲಿ ಟಿಸಿಎಸ್, ಎಂ & ಎಂ ಮತ್ತು ಎಸ್‌ಬಿಐ ಇವೆ.

ABOUT THE AUTHOR

...view details