ಮುಂಬೈ: ಈಕ್ವಿಟಿ ಮಾನದಂಡ ಸೆನ್ಸೆಕ್ಸ್ ಆರಂಭಿಕ ನಷ್ಟದಿಂದ ಚೇತರಿಸಿಕೊಂಡ ನಂತರ ಸೂಚ್ಯಂಕದ ಹೆವಿವೇಯ್ಟ್ಸ್ ಷೇರುಗಳಾದ ರಿಲಯನ್ಸ್, ಟಿಸಿಎಸ್ ಮತ್ತು ಇನ್ಫೋಸಿಸ್ ಲಾಭದ ವಹಿವಾಟು ನಡೆಸುತ್ತಿವೆ.
ದಿನದ ಆರಂಭಿಕ ವಹಿವಾಟಿನಲ್ಲಿ 60 ಅಂಕ ಕುಸಿದ ನಂತರ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 487.48 ಅಂಕ ಹೆಚ್ಚುವರಿ ಏರಿಕೆಯಾಗಿ 50,285.20 ಅಂಕಗಳ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 158.95 ಅಂಕ ಏರಿಕೆಯಾಗಿ 14806.80 ಅಂಕಗಳಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಶೇ 4.50ರಷ್ಟು ಏರಿಕೆ ಕಂಡಿದ್ದು ಡಾ. ರೆಡ್ಡೀಸ್, ಪವರ್‌ಗ್ರಿಡ್, ಟೆಕ್ ಮಹೀಂದ್ರಾ, ಎಂ&ಎಂ, ಸನ್ ಫಾರ್ಮಾ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಮಾರುತಿ, ಕೊಟಕ್ ಬ್ಯಾಂಕ್, ಎಸ್‌ಬಿಐ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಟಾಪ್ ಲೂಸರ್ಗಳಾಗಿವೆ.