ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ವಾರದ ಮೊದಲೆರಡು ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿಯಲ್ಲಿ ಭಾರಿ ಏರಿಕೆ ಕಂಡಿದೆ. ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್‌ಗಳು ಉತ್ತಮ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ 403 ಅಂಕಗಳಷ್ಟು ಏರಿಕೆ ಕಂಡಿದೆ.
ಷೇರು ಸೂಚ್ಯಂಕವು 403.19 ಪಾಯಿಂಟ್‌ಗಳಷ್ಟು ಹೆಚ್ಚಾಗಿ 55,958.98 ಅಂಕಗಳೊಂದಿಗೆ ದಿನದ ವಹಿವಾಟು ಮುಗಿಸಿದೆ. ಇನ್ನು NSE ನಿಫ್ಟಿ 128.15 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದ್ದು, ದಿನದಾಂತ್ಯಕ್ಕೆ 16,624.60 ಅಂಕಗಳೊಂದಿಗೆ ವ್ಯವಹಾರ ಕೊನೆಗೊಳಿಸಿತು.
ಸೆನ್ಸೆಕ್ಸ್ನಲ್ಲಿ ಬಜಾಜ್ ಫಿನ್‌ಸರ್ವ್ ವ್ಯವಹಾರದಲ್ಲಿ ಶೇಕಡಾ 8 ರಷ್ಟು ಏರಿಕೆ ಕಂಡಿದೆ. ಇನ್ನು ಕಳೆದ ವಾರಾಂತ್ಯದಲ್ಲಿ ಶೇ 9 ರಷ್ಟು ಕುಸಿತ ಕಂಡಿದ್ದ ಟಾಟಾ ಸ್ಟೀಲ್ ಷೇರುಗಳು ಬೆಲೆಯಲ್ಲಿ ಇಂದು ಭಾರಿ ಏರಿಕೆ ದಾಖಲಿಸಿತು. ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್ಗಳು ಹೆಚ್ಚಿನ ವಹಿವಾಟು ನಡೆಸಿವೆ.