ಮುಂಬೈ: ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗಳಿಕೆ ಹಾಗೂ ವಿದೇಶಿ ನಿಧಿಯ ಒಳಹರಿವಿನ ಮಧ್ಯೆ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ದಿನದ ಗರಿಷ್ಠ ಮಟ್ಟ ತಲುಪಿದೆ.
ಆರಂಭಿಕ ವಹಿವಾಟಿನಲ್ಲಿ ಜೀವಿತಾವಧಿಯ ಗರಿಷ್ಠ 49,776.29 ಮುಟ್ಟಿದ ನಂತರ, ಬಿಎಸ್‌ಇ ಸೂಚ್ಯಂಕವು 201.65 ಅಂಕ ಅಥವಾ ಶೇ 0.41ರಷ್ಟು ಹೆಚ್ಚಳವಾಗಿ 49,718.76 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಆರಂಭಿಕ ಹಂತದಲ್ಲಿ 70.55 ಅಂಕ ಏರಿಕೆ ಕಂಡು 14,634 ಅಂಕಗಳಲ್ಲಿ ವ್ಯಾಪಾರ ನಿರತವಾಗಿದೆ.
ಭಾರ್ತಿ ಏರ್‌ಟೆಲ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ 4ರಷ್ಟು ಗಳಿಕೆ ಕಂಡಿದ್ದು ಒಎನ್‌ಜಿಸಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಂ&ಎಂ, ಎನ್‌ಟಿಪಿಸಿ, ಎಲ್ & ಟಿ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ. ಮತ್ತೊಂದೆಡೆ ಟೈಟನ್, ಕೋಟಕ್ ಬ್ಯಾಂಕ್, ಡಾ. ರೆಡ್ಡೀಸ್, ಟಿಸಿಎಸ್ ಮತ್ತು ಎಚ್‌ಸಿಎಲ್ ಟೆಕ್ ನಷ್ಟ ಕಂಡಿವೆ.
ಇದನ್ನೂ ಓದಿ: ಸೂರ್ಯ ಪಥ ಬದಲಿಸಿದ್ರೂ ಪೆಟ್ರೋಲ್ ರೇಟ್ ಇಳಿಯುತ್ತಿಲ್ಲ: ಸಂಕ್ರಮಣಕ್ಕೆ ಮತ್ತೆ ಬೆಲೆ ಏರಿಕೆ ಶಾಕ್!
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 247.79 ಅಂಕ ಹೆಚ್ಚಳವಾಗಿ 49,517.11 ಅಂಕಗಳ ಮಟ್ಟದಲ್ಲೂ ನಿಫ್ಟಿ 78.70 ಅಂಕಗಳ ಜಿಗಿತದೊಂದಿಗೆ 14,563.45 ಅಂಕಗಳ ಮಟ್ಟದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ್ದವು. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಮಂಗಳವಾರ 571.47 ಕೋಟಿ ರೂ. ಷೇರು ಖರೀದಿಸಿದ್ದರು.