ಕರ್ನಾಟಕ

karnataka

ETV Bharat / business

ಮೊನ್ನೆ 550 ಇಂದು 200 ಅಂಕ ಕುಸಿದ ಸೆನ್ಸೆಕ್ಸ್​: ಏನಾಗುತ್ತಿದೆ ಷೇರುಪೇಟೆಯಲ್ಲಿ? - ಓಪನಿಂಗ್ ಸ್ಟಾಕ್ ಮಾರುಕಟ್ಟೆ

ಆರಂಭಿಕ ವಹಿವಾಟಿನಲ್ಲಿ 30 - ಷೇರುಗಳ ಬಿಎಸ್ಇ ಸೂಚ್ಯಂಕವು 203.52 ಅಂಕ ಅಥವಾ ಶೇ 0.42ರಷ್ಟು ಕುಸಿತ ಕಂಡು 48,831.15 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 70.60 ಅಂಕ ಅಥವಾ ಶೇ 0.49ರಷ್ಟು ಕುಸಿದು 14,363.10 ಮಟ್ಟದಲ್ಲಿ ನಿರತವಾಗಿದೆ.

Sensex
ಸೆನ್ಸೆಕ್ಸ್

By

Published : Jan 18, 2021, 11:57 AM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಮಿಶ್ರ ಪ್ರವೃತ್ತಿಯ ಮಧ್ಯೆ ಸೂಚ್ಯಂಕ ಮೇಜರ್​ಗಳಾದ ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ಟಿಸಿಎಸ್‌ನಲ್ಲಿನ ನಷ್ಟದಿಂದಾಗಿ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 200 ಅಂಕ ಕುಸಿತ ಕಂಡಿದೆ.

ಆರಂಭಿಕ ವಹಿವಾಟಿನಲ್ಲಿ 30 - ಷೇರುಗಳ ಬಿಎಸ್ಇ ಸೂಚ್ಯಂಕವು 203.52 ಅಂಕ ಅಥವಾ ಶೇ 0.42ರಷ್ಟು ಕುಸಿತ ಕಂಡು 48,831.15 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 70.60 ಅಂಕ ಅಥವಾ ಶೇ 0.49ರಷ್ಟು ಕುಸಿದು 14,363.10 ಮಟ್ಟದಲ್ಲಿ ನಿರತವಾಗಿದೆ.

ಇದನ್ನೂ ಓದಿ: ಇಂದೋರ್​ನಲ್ಲಿ ದಂಪತಿ ಬಂಧನ, 19,600 ಡಾಲರ್‌ ವಶ

ಇಂಡೆಸ್‌ಇಂಡ್ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ 3ರಷ್ಟು ನಷ್ಟ ಅನುಭವಿದ್ದು ಪವರ್‌ಗ್ರಿಡ್, ಮಾರುತಿ, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಒಎನ್‌ಜಿಸಿ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಸಿಎಲ್ ಟೆಕ್, ಎಸ್‌ಬಿಐ, ಟೆಕ್ ಮಹೀಂದ್ರಾ ಮತ್ತು ಐಸಿಐಸಿಐ ಬ್ಯಾಂಕ್ ಟಾಪ್​ ಗೇನರ್​ಗಳಾಗಿದ್ದಾರೆ.

ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 549.49 ಅಂಕ ಅಥವಾ ಶೇ 1.11ರಷ್ಟು ಕುಸಿದು 49,034.67 ಅಂಕಗಳ ಮಟ್ಟದಲ್ಲಿತ್ತು. ನಿಫ್ಟಿ ಕೂಡ 161.90 ಅಂಕ ಅಥವಾ ಶೇ 1.11ರಷ್ಟು ಕುಸಿದು 14,433.70 ಅಂಕಗಲ್ಲಿ ನಿರಾಶಾದಾಯಕವಾಗಿ ಕೊನೆಗಂಡವು. ವಿನಿಮಯ ಮಾಹಿತಿಯ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಶುಕ್ರವಾರ 971.06 ಕೋಟಿ ರೂ. ಷೇರು ಖರೀದಿಸಿದ್ದರು.

ABOUT THE AUTHOR

...view details