ಮುಂಬೈ: ಷೇರು ಮಾರುಕಟ್ಟೆ ಆರಂಭಿಕ ವ್ಯವಹಾರದಲ್ಲಿ 700 ಅಂಕಗಳಷ್ಟು ಕುಸಿದು ಹೂಡಿಕೆದಾರರಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಬಿಎಸ್ಸಿ ಟಾಪ್ 30 ಷೇರುಗಳ ಸೂಚ್ಯಂಕದಲ್ಲಿ ಸುಮಾರು 699 ಅಂಕಗಳು ಕುಸಿದಿದೆ. ಈ ಮೂಲಕ 41 ಸಾವಿರಕ್ಕೂ ಹೆಚ್ಚು ಅಂಕಗಳಿದ್ದ ಮುಂಬೈಪೇಟೆ ಷೇರು ಸೂಚ್ಯಂಕ 40 765 ಅಂಕಕ್ಕೆ ಕುಸಿದಿದೆ.
ಅಮೆರಿಕ - ಇರಾನ್ ಯುದ್ಧ ಕಾರ್ಮೋಡ.. ಷೇರುಮಾರುಕಟ್ಟೆಯಲ್ಲಿ ಆಘಾತದ ಸಿಡಿಲಬ್ಬರ - ರಾಷ್ಟ್ರೀಯ ಷೇರು ಪೇಟೆ
ಅಮೆರಿಕ - ಇರಾನ್ ನಡುವಿನ ಯುದ್ಧದ ಕಾರ್ಮೋಡದಿಂದಾಗಿ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದೆ.
ಷೇರುಮಾರುಕಟ್ಟೆಯಲ್ಲಿ ಆಘಾತ
ಇನ್ನು ರಾಷ್ಟ್ರೀಯ ಷೇರು ಪೇಟೆ ಎನ್ಎಸ್ಸಿ ಸಹ 209 ಅಂಕಗಳ ನಷ್ಟವನ್ನ ಹೊಂದಿದೆ. ಇಂದಿನ ವ್ಯವಹಾರದಲ್ಲಿ ಬಜಾಜ್ ಫೈನಾನ್ಸ್ ಅತಿದೊಡ್ಡ ನಷ್ಟವನ್ನ ಅನುಭವಿಸಿದೆ. ಎಸ್ಬಿಐ, ಹೆಚ್ಡಿಎಫ್ಸಿ, ಮಾರುತಿ, ಏಷ್ಯನ್ ಪೇಂಟ್ಸ್ ಸೇರಿದಂತೆ ಪ್ರಮುಖ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.