ಕರ್ನಾಟಕ

karnataka

ETV Bharat / business

ಕರೋನ ವೈರಸ್​ ಹೊಡೆತಕ್ಕೆ 88 ರೂ. ಕುಸಿದ ಕಚ್ಚಾ ತೈಲ: ಪೆಟ್ರೋಲ್ ದರವೆಷ್ಟು ಗೊತ್ತೇ? - ಬೆಂಗಳೂರಲ್ಲಿ ಪೆಟ್ರೋಲ್ ದರ

ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 17 ಪೈಸೆ ಮತ್ತು ಡೀಸೆಲ್ ದರದಲ್ಲಿ 19 ಪೈಸೆಯಷ್ಟು ಕಡಿತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್‌ ₹ 74.65 ಹಾಗೂ ಡೀಸೆಲ್​ ₹ 68.92ರಲ್ಲಿ ಮಾರಾಟ ಆಗುತ್ತಿದೆ.

petrol
ಪೆಟ್ರೋಲ್

By

Published : Jan 23, 2020, 1:22 PM IST

ನವದೆಹಲಿ: ಚೀನಾದಲ್ಲಿ ಕರೋನ ವೈರಸ್ ಉಲ್ಬಣಗೊಂಡ ಬಳಿಕ ಅಂತಾರಾಷ್ಟ್ರೀಯ ಕಚ್ಚಾತೈಲ ದರ ಕುಸಿತದಿಂದಾಗಿ ಚಿಲ್ಲರೆ ಇಂಧನ ಬೆಲೆ ಮತ್ತಷ್ಟು ಇಳಿಕೆಯಾಗಿದೆ.

ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 17 ಪೈಸೆ ಮತ್ತು ಡೀಸೆಲ್ ದರದಲ್ಲಿ 19 ಪೈಸೆಯಷ್ಟು ಕಡಿತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್‌ ₹ 74.65 ಹಾಗೂ ಡೀಸೆಲ್​ ₹ 68.92ರಲ್ಲಿ ಮಾರಾಟ ಆಗುತ್ತಿದೆ.

ಪೆಟ್ರೋಲ್​ & ಡೀಸೆಲ್ ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅನುಕ್ರಮವಾಗಿ ₹ 80.25 & ₹ 72.27, ₹ 78.23 & ₹ 71.29, ₹ 78.49 & ₹ 72.83 ಹಾಗೂ ₹ 77.32 & ₹ 67.97ಯಲ್ಲಿ ಮಾರಾಟ ಆಗುತ್ತಿದೆ ಎಂದು ಇಂಡಿಯನ್ ಆಯಿಲ್​ ಕಾರ್ಪೊರೇಷನ್ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ಜನವರಿ 12ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿದೆ. ಗುರುವಾರದಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಶೇ 2 ರಷ್ಟು (₹ 88.24) ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್​ ಬ್ರೆಂಟ್​ ಕಚ್ಚಾ ತೈಲ 62.17 ಡಾಲರ್​ಗೆ ಮಾರಾಟ ಆಗುತ್ತಿದೆ.

ABOUT THE AUTHOR

...view details