ನವದೆಹಲಿ: ಚೀನಾ ಮೂಲದ ರಿಯಲ್ಮಿ ಮೊಬೈಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ರಿಯಲ್ಮಿ ಸಿ12 ಮತ್ತು ಸಿ15 ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಕಳೆದ ತಿಂಗಳು ರಿಯಲ್ಮಿ ಸಿ11 ಸ್ಮಾರ್ಟ್‌ಫೋನ್ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಅದೇ ಸರಣಿಯ ಸಿ12 ಹಾಗೂ ಸಿ15 ಸ್ಮಾರ್ಟ್‌ಫೋನ್ ಇಂದು ಪರಿಚಯಿಸಿದೆ. ಯೂಟ್ಯೂಬ್ನಲ್ಲಿ ಲೈವ್ ಕಾರ್ಯಕ್ರಮದ ಮೂಲಕ ಈ ಎರಡೂ ಉತ್ಪನ್ನಗಳನ್ನು ಭಾರತೀಯ ಮೊಬೈಲ್ ಪ್ರಿಯರಿಗೆ ಬಿಡುಗಡೆ ಮಾಡಿತು.
ರಿಯಲ್ಮಿ ಸಿ15 ಸ್ಮಾರ್ಟ್‌ಫೋನ್ 6.5 ಇಂಚಿನ HD+ಡಿಸ್ಪ್ಲೇ ಜೊತೆಗೆ ಮೀಡಿಯಾಟೆಕ್ ಹೆಲಿಯೋ ಜಿ35 ಪ್ರೊಸೆಸರ್ ಹೊಂದಿದೆ. ಆ್ಯಂಡ್ರಾಯ್ಡ್ 10ನಿಂದ ಕಾರ್ಯ ನಿರ್ವಹಿಸುತ್ತದೆ. ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್ 4ಜಿಬಿ ಱಮ್ ಮತ್ತು 128 ಜಿಬಿ ಮೆಮೊರಿ ಸಾಮರ್ಥ್ಯ ಹೊಂದಿದೆ.
13 ಎಂಪಿ ಪ್ರೈಮರಿ ಕ್ಯಾಮರಾ, 8 ಎಂಪಿ ಸೆಕಂಡರಿ ಕ್ಯಾಮರಾ ಜೊತೆಗೆ ಅಲ್ಟ್ರಾವೈಡ್ ಲೆನ್ಸ್, 2 ಎಂಪಿ ಮೊನೊಕ್ರೋಮ್ ಕ್ಯಾಮರಾ ಹಾಗೂ 2 ಎಂಪಿ ಬ್ಲ್ಯಾಕ್ ಆ್ಯಂಡ್ ವೈಟ್ ಇದೆ. ಸೆಲ್ಫಿಗೆ 8 ಎಂಪಿ ಕ್ಯಾಮರಾ, 6000mAh ಬ್ಯಾಟರಿ ಸೇರಿ ಹಲವು ಫೀಚರ್ಗಳನ್ನು ಹೊಂದಿದೆ. ಇದರ ಬೆಲೆ 10,999 ರೂಪಾಯಿ ಎಂದು ತಿಳಿಸಿದೆ.
ರಿಯಲ್ಮಿ ಸಿ 12 ಮೊಬೈಲ್ 6.5 ಇಂಚಿನ HD+ಡಿಸ್ಪ್ಲೇ ಜೊತೆಗೆ ಮೀಡಿಯಾಟೆಕ್ ಹೆಲಿಯೋ ಜಿ35 ಪ್ರೊಸೆಸರ್ ಹೊಂದಿದೆ. ಆ್ಯಂಡ್ರಾಯ್ಡ್ 10ನಿಂದ ಕಾರ್ಯ ನಿರ್ವಹಿಸುತ್ತದೆ. ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್ 3ಜಿಬಿ ಱಮ್ ಮತ್ತು 128 ಜಿಬಿ ಮೆಮೊರಿ ಸಾಮರ್ಥ್ಯ ಹೊಂದಿದೆ. 13 ಎಂಪಿ ಕ್ಯಾಮರಾ, 2 ಎಂಪಿ ಮೊನೊಕ್ರೋಮ್ ಸೆನ್ಸಾರ್, 2 ಎಂಪಿ ಮ್ಯಾಕ್ರೋ ಲೆನ್ಸ್, ಸೆಲ್ಫಿಗೆ 5 ಎಂಪಿ ಕ್ಯಾಮರಾ ಇದೆ. 6000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಅಂದಾಜು 9,999 ರೂ.ಯಷ್ಟಿದೆ.