ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ರಿಯಲ್ ಮಿ ತನ್ನ ಬಹುನಿರೀಕ್ಷಿತ ರಿಯಲ್ಮಿ ಎಕ್ಸ್2 ಪ್ರೊ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 ಚಿಪ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆ (ಬುಧವಾರ) ಮಾಡಿದೆ.
ಎರಡು ಮಾದರಿಯಲ್ಲಿ ಬಿಡುಗಡೆ ಮಾಡಿರುವ ಉತ್ಪನ್ನಗಳ ಆರಂಭಿಕ ದರ 29,999 ರೂ. ನಿಗದಿಪಡಿಸಿದೆ. 8 ಜಿಬಿ +128 ಜಿಬಿ ಹ್ಯಾಂಡ್ಸೆಟ್ನ 29,999 ರೂ. ಹಾಗೂ 12 ಜಿಬಿ + 256 ಜಿಬಿ ಹ್ಯಾಂಡ್ಸೆಟ್ನ 33,999 ರೂ.ಯಲ್ಲಿ ನವೆಂಬರ್ 26ರಿಂದ ಮೊಬೈಲ್ ಪ್ರಿಯರ ಕೈಸೇರಲಿದೆ.
ರಿಯಲ್ಮೆ ಎಕ್ಸ್2 ಪ್ರೊ ಅನ್ನು ನಮ್ಮ ವಿವೇಚನಾಶೀಲ ಗ್ರಾಹಕರಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ. ಈ ಬೆಲೆ ವಿಭಾಗದಲ್ಲಿ ಲಭ್ಯವಿರುವ ಅತ್ಯುತ್ತಮ ಪ್ರಮುಖ ಸ್ಮಾರ್ಟ್‌ಫೋನ್ ಆಗಿದೆ. 50W ಸೂಪರ್ ವಿಒಸಿ ಫ್ಲ್ಯಾಷ್ ಚಾರ್ಜರ್ ಹೊಂದಿರುವ ಭಾರತದ ಅತಿ ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಲಿದೆ ಎಂದು ರಿಯಲ್ ಮಿ ಇಂಡಿಯಾದ ಸಿಇಒ ಮಾಧವ್ ಶೆತ್ ಹೇಳಿದ್ದಾರೆ.
ರಿಯಲ್ ಮಿ ಅಭಿವೃದ್ಧಿ ಪಡಿಸಿರುವ '50W ಸೂಪರ್ ವಿಒಸಿ ಫ್ಲ್ಯಾಶ್ ಚಾರ್ಜ್'ನಿಂದಾಗಿ ಇದು 35 ನಿಮಿಷದಲ್ಲಿ 100 ಪ್ರತಿಶತದಷ್ಟು ಫೋನ್ ಚಾರ್ಜ್ ಆಗಲಿದೆ.ರಿಯಲ್ಮೆ ಎಕ್ಸ್ 2 ಪ್ರೊ ನೆಪ್ಚೂನ್ ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಮತ್ತೆರಡು ಉತ್ಪನ್ನಗಳು ಸಿದ್ಧವಾಗಿವೆ. ಜಪಾನಿನ ವಿನ್ಯಾಸಕ ನಾವೊಟೊ ಫುಕಾಸಾವಾ ವಿನ್ಯಾಸಗೊಳಿಸಿದ ಕೆಂಪು ಇಟ್ಟಿಗೆ ಕಾಂಕ್ರೀಟ್ ಕಲರ್ ಮಾಸ್ಟರ್ ಆವೃತ್ತಿಯನ್ನು ಶೀಘ್ರದಲ್ಲೇ ಬರಲಿದ್ದು, ಇದರ ಬೆಲೆ 34,999 ರೂ. ಇರಲಿದೆ ಎಂದು ಕಂಪನಿ ತಿಳಿಸಿದೆ.