ನವದೆಹಲಿ: ಡಿಸೆಂಬರ್‌ನಲ್ಲಿ ಪ್ರಯಾಣಿಕರ ವಾಹನಗಳ (ಪಿವಿ) ಚಿಲ್ಲರೆ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 23.99ರಷ್ಟು ಹೆಚ್ಚಳಗೊಂಡು 2,71,249 ಯುನಿಟ್‌ಗಳಿಗೆ ತಲುಪಿದೆ ಎಂದು ಆಟೋಮೊಬೈಲ್ ವಿತರಕರ ಸಂಸ್ಥೆ ಎಫ್‌ಎಡಿಎ ತಿಳಿಸಿದೆ.
1,477 ಪ್ರಾದೇಶಿಕ ಸಾರಿಗೆ ಕಚೇರಿಗಳ ಪೈಕಿ (ಆರ್‌ಟಿಒ) 1,270 ಕಚೇರಿಗಳಿಂದ ವಾಹನ ನೋಂದಣಿಯ ಡೇಟಾ ಸಂಗ್ರಹಿಸಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಪ್ರಕಾರ, ಪಿವಿ ಮಾರಾಟವು 2019ರ ಡಿಸೆಂಬರ್‌ನಲ್ಲಿ 2,18,775 ಯುನಿಟ್‌ಗಳಷ್ಟಿತ್ತು.
ದ್ವಿಚಕ್ರ ವಾಹನಗಳ ಮಾರಾಟವು ಕಳೆದ ತಿಂಗಳು ಶೇ 11.88ರಷ್ಟು ಏರಿಕೆ ಕಂಡು 14,24,620ಕ್ಕೆ ತಲುಪಿದ್ದು, 2019ರ ಡಿಸೆಂಬರ್‌ನಲ್ಲಿ 12,73,318 ಯುನಿಟ್ ಮಾರಾಟ ಆಗಿದ್ದವು. ವಾಣಿಜ್ಯ ವಾಹನಗಳ ಮಾರಾಟವು 2020ರ ಡಿಸೆಂಬರ್‌ನಲ್ಲಿ ಶೇ 13.52ರಷ್ಟು ಕುಸಿದು 51,454ಕ್ಕೆ ತಲುಪಿದ್ದು, ವರ್ಷದ ಹಿಂದೆ 59,497 ಯುನಿಟ್‌ಗಳಷ್ಟಿತ್ತು.