ಕರ್ನಾಟಕ

karnataka

ETV Bharat / business

3 ತಿಂಗಳಲ್ಲಿ 4 ರೂ. ಜಿಗಿದ ಪೆಟ್ರೋಲ್​ ದರ... ಡೀಸೆಲ್ ಬೆಲೆ ಎಷ್ಟು?

2019ರ ಮೊದಲ ಮೂರು ತಿಂಗಳ ಅವಧಿಯಲ್ಲಿ ದೇಶಿಯ ಇಂಧನ ಮಾರುಕಟ್ಟೆಯ ಚಿಲ್ಲರೆ ಪೆಟ್ರೋಲ್ ದರ ಮೇಲ್ಮುಖವಾಗಿ ಸಾಗಿದ್ದು, ದೆಹಲಿಯಲ್ಲಿ ಜನವರಿ 1ರಿಂದ ಇಲ್ಲಿವರೆಗೆ ಲೀ.ಗೆ 4 ರೂ. ಜಿಗಿದಂತಾಗಿದೆ.

By

Published : Mar 24, 2019, 4:28 PM IST

ಡೀಸೆಲ್​

ನವದೆಹಲಿ: ಭಾರತದ ಪ್ರಮುಖ ಮೆಟ್ರೊ ನಗರಗಳಲ್ಲಿ ಇಂಧನ ಚಿಲ್ಲರೆ ಮಾರುಕಟ್ಟೆಯ ಲೀಟರ್​ ಪೆಟ್ರೋಲ್ ದರದಲ್ಲಿ 5 ಪೈಸೆ ಏರಿಕೆ ಆಗಿದ್ದು, ಡಿಸೇಲ್​ ಬೆಲೆಯು ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್​ ತನ್ನ ವೆಬ್​ಸೈಟ್​ನಲ್ಲಿ ಬೆಲೆ ಏರಿಕೆ ಕುರಿತು ಪ್ರಕಟಿಸಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀ. ಪೆಟ್ರೋಲ್​ ಮತ್ತು ಡೀಸೆಲ್​ ಕ್ರಮವಾಗಿ ₹ 72.86 & ₹ 66.60ರಲ್ಲಿ ವಹಿವಾಟು ನಿರತವಾಗಿದೆ.

ಕೊಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಲೀ. ಪೆಟ್ರೋಲ್​ ಮತ್ತು ಡೀಸೆಲ್​ ಕ್ರಮವಾಗಿ ₹ 74.93 & 68.39, ₹ 78.48 & ₹ 69.76, ₹ 75.67 & ₹ 70.37 ಹಾಗೂ ₹ 75.28 & ₹ 68.81 ದರದಲ್ಲಿ ಮಾರಾಟ ಆಗುತ್ತಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಬೆಂಚ್ಮಾರ್ಕ್ ಬ್ರೆಂಟ್ ಪ್ರತಿ ಬ್ಯಾರೆಲ್​ ಕಚ್ಚಾ ತೈಲವು ಪ್ರಸ್ತುತ 67 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ABOUT THE AUTHOR

...view details