ಮುಂಬೈ:ತೈಲ ಮಾರುಕಟ್ಟೆ ಕಂಪನಿಗಳು ನಾಲ್ಕು ದಿನಗಳ ಸ್ಥಗಿತದ ನಂತರ ಮಂಗಳವಾರ ಇಂಧನ ಬೆಲೆ ತಗ್ಗಿಸಿವೆ. ಸಾರಿಗೆ ಇಂಧನದ ಬೆಲೆಗಳು ಐದು ಮಹಾನಗರಗಳಲ್ಲಿ 22-19 ಪೈಸೆ ವ್ಯಾಪ್ತಿಯಲ್ಲಿ ಕುಸಿದಿವೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಅನ್ನು ಪ್ರತಿ ಲೀಟರ್‌ಗೆ 90.56 ರೂ.ಗೆ ಮಾರಾಟವಾಗುತ್ತಿದ್ದು, ಹಿಂದಿನ ದಿನ 90.78 ರೂ.ಗಿಂತ 22 ಪೈಸೆ ಕಡಿಮೆ ಯಾಗಿದೆ.
ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದ ಇತರ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ ಲೀಟರ್‌ಗೆ 96.98, 92.58 ಮತ್ತು 90.77 ರೂ.ಗಳಲ್ಲಿ ಮಾರಾಟ ಆಗುತ್ತಿದೆ. ಹಿಂದಿನ ದಿನದವರೆಗೂ 97.19, 92.77 ಮತ್ತು 90.98 ರೂ.ಯಲ್ಲಿ ಖರೀದಿ ಆಗುತ್ತಿತ್ತು.
ಇದನ್ನೂ ಓದಿ: ವ್ಯಾಪಾರದ ಬಣ್ಣ ಕುಂದಿಸಿದ ಕೋವಿಡ್ ಎಫೆಕ್ಟ್ : ಈ ಬಾರಿ ಹೋಳಿ ವೇಳೆ 35,000 ಕೋಟಿ ರೂ. ನಷ್ಟ!
ಡೀಸೆಲ್ ಬೆಲೆಯೂ ಮಂಗಳವಾರ ಕುಸಿದಿದ್ದು, ದೆಹಲಿಯಲ್ಲಿ ಡೀಸೆಲ್ ಬೆಲೆ 80.87 ರೂ.ಗಳಾಗಿದೆ. ಸೋಮವಾರದ ಮಟ್ಟಕ್ಕಿಂತ 23 ಪೈಸೆ ಕಡಿಮೆಯಾಗಿದೆ.
ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಡೀಸೆಲ್ ಲೀಟರ್‌ಗೆ 87.96, 85.88 ಮತ್ತು 83.75 ರೂ.ಗೆ ಮಾರಾಟ ಆಗುತ್ತಿದೆ. ಹಿಂದಿನ ದಿನ 88.20 ರೂ., 86.10 ಮತ್ತು 83.98 ರೂ.ಗಳಿಷ್ಟಿತ್ತು.
ಸಿಲಿಕಾನ್ ಸಿಟಿಯಲ್ಲಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ ಇಳಿಕೆಯಾಗಿ 93.59 ಹಾಗೂ ಡೀಸೆಲ್ ಮೇಲೆ 24 ಪೈಸೆ ಇಳಿದು 85.75 ರೂ.ಗಳಲ್ಲಿ ಖರೀದಿಯಾಗುತ್ತಿದೆ. ಚಿಲ್ಲರೆ ಇಂಧನ ಬೆಲೆ ಕೊನೆಯದಾಗಿ ಮಾರ್ಚ್ 25 ರಂದು ಕುಸಿದಿತ್ತು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊನೆಯದಾಗಿ ಫೆಬ್ರವರಿ 27ರಂದು ಪರಿಷ್ಕರಿಸಲಾಯಿತು. ರಾಜ್ಯ ಚುನಾವಣೆಗೆ ಮುಂಚಿತವಾಗಿ ಬೆಲೆಗಳು ಹೆಚ್ಚಾಗಿ ಬದಲಾಗುತ್ತಿಲ್ಲ.