ನವದೆಹಲಿ:ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದೆ. ಸತತ ಏರಿಕೆಗಳೊಂದಿಗೆ ಜನಸಮಾನ್ಯರು ಪರದಾಡುವಂತೆ ಆಗಿದೆ. ತೈಲ ಕಂಪನಿಗಳು ಶುಕ್ರವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿವೆ.
ಶುಕ್ರವಾರದಂದು ಲೀಟರ್ ಪೆಟ್ರೋಲ್ ಬೆಲೆ 31 ಪೈಸೆ ಮತ್ತು ಡೀಸೆಲ್ 28 ಪೈಸೆ ಹೆಚ್ಚಾಗಿದೆ. ಇದರೊಂದಿಗೆ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 102 ರೂ. ದೆಹಲಿಯಲ್ಲಿ 95.85 ರೂ.ಗೆ ತಲುಪಿದೆ. ಮುಂಬೈನಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 94.14 ರೂ., ದೆಹಲಿಯಲ್ಲಿ 86.75 ರೂ.ಗೆ ಏರಿದೆ. ಹೈದರಾಬಾದ್‌ನಲ್ಲೂ ಪೆಟ್ರೋಲ್ ಬೆಲೆ 100 ರೂ. ದಾಟಿದೆ.
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಕ್‌ನ ಹೆಚ್ಚಿನ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ಶತಕದ ಗಡಿ ಮುಟ್ಟಿದೆ. ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆಯಲ್ಲಿ 106.94 ರೂ. ತಲುಪಿದ್ದು, ಇದು ದೇಶದಲ್ಲಿ ಅತಿ ಹೆಚ್ಚು ದರವಾಗಿದೆ. ಈ ಪ್ರದೇಶದಲ್ಲಿ ಡೀಸೆಲ್ ಬೆಲೆಯೂ 99.80. ರೂ. ಇತ್ತು.
ಓದಿ: ಕೊರೊನಾ ದುಃಖ ಸಾಗರದಲ್ಲಿ ಜಾಗತಿಕ ಆರ್ಥಿಕತೆ: ಆಗಸದ ಎತ್ತರಕ್ಕೆ ಜಿಗಿದ ಚೀನಾ GDP... ಭಾರತದ್ದು?
ಮೇ 4ರಿಂದ ಇಂಧನ ಬೆಲೆಗಳು ಸ್ಥಿರವಾಗಿ ಏರುತ್ತಿವೆ. ಅಂದಿನಿಂದ ಬೆಲೆಗಳನ್ನು 23 ಬಾರಿ ಪರಿಷ್ಕರಿಸಲಾಗಿದೆ. ಪೆಟ್ರೋಲ್ ಬೆಲೆ ವ್ಯಾಟ್ ಮತ್ತು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ತೈಲ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಪ್ರಮುಖ ನಗರಗಳಲ್ಲಿ ಇಂಧನ ಬೆಲೆಗಳು (ಪ್ರತಿ ಲೀಟರ್‌ಗೆ) ಈ ಕೆಳಗಿನಂತಿವೆ.