ಕರ್ನಾಟಕ

karnataka

ETV Bharat / business

15 ದಿನಗಳ ಬಳಿಕ ಕಡಿಮೆಯಾದ ಪೆಟ್ರೋಲ್, ಡೀಸೆಲ್ ದರ! - ಇಂದಿನ ಡೀಸೆಲ್ ದರ

ಕಚ್ಚಾ ತೈಲ ಬ್ಯಾರೆಲ್‌ಗೆ 65 ಡಾಲರ್​ಗಿಂ ಕಡಿಮೆ ಆಗಿದ್ದರಿಂದ ಕಳೆದ ಹದಿನೈದು ದಿನಗಳಿಂದ ಮೃದುವಾಗಿ ಸಾಗುತ್ತಿದ್ದ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾವಣೆಯಾಗಿದೆ. ಜಾಗತಿಕ ಸಂಸ್ಕರಿಸಿದ ಉತ್ಪನ್ನಗಳ ಬೆಲೆಗಳು ಮತ್ತು ಡಾಲರ್ ವಿನಿಮಯ ದರದ ಆಧಾರದ ಮೇಲೆ 15 ದಿನಗಳಿಗೆ ಒಮ್ಮೆ ಒಎಂಸಿಗಳು ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ.

Petrol
Petrol

By

Published : Apr 15, 2021, 3:23 PM IST

ನವದೆಹಲಿ:ಈ ತಿಂಗಳ ಆರಂಭದಲ್ಲಿ ಸ್ವಲ್ಪ ಮೃದುವಾದ ಜಾಗತಿಕ ತೈಲ ಬೆಲೆಗಳ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ತೈಲ ಮಾರುಕಟ್ಟೆ ಕಂಪನಿಗಳು ನಿರ್ಧರಿಸಿದ್ದರಿಂದ ದೇಶದಲ್ಲಿ ಚಿಲ್ಲರೆ ಇಂಧನ ಬೆಲೆ ಗುರುವಾರ ಇಳಿಕೆಯಾದವು.

ಗುರುವಾರ ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆ ಕ್ರಮವಾಗಿ ಲೀಟರ್‌ಗೆ 16 ಪೈಸೆ ಮತ್ತು 14 ಪೈಸೆ ಇಳಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಈಗ ಪೆಟ್ರೋಲ್ ಲೀಟರ್‌ಗೆ 90.40 ರೂ.ಗೆ ಮಾರಾಟ ಆಗುತ್ತಿದೆ. ಡೀಸೆಲ್ ಈಗ ಲೀಟರ್​ಗೆ 80.73 ರೂ.ಯಲ್ಲಿ ಖರೀದಿಯಾಗುತ್ತದೆ.

ಕಚ್ಚಾ ತೈಲ ಬ್ಯಾರೆಲ್‌ಗೆ 65 ಡಾಲರ್​ಗಿಂತ ಕಡಿಮೆ ಆಗಿದ್ದರಿಂದ ಕಳೆದ ಹದಿನೈದು ದಿನಗಳಿಂದ ಮೃದುವಾಗಿ ಸಾಗುತ್ತಿದ್ದ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾವಣೆಯಾಗಿದೆ. ಜಾಗತಿಕ ಸಂಸ್ಕರಿಸಿದ ಉತ್ಪನ್ನಗಳ ಬೆಲೆಗಳು ಮತ್ತು ಡಾಲರ್ ವಿನಿಮಯ ದರದ ಆಧಾರದ ಮೇಲೆ 15 ದಿನಗಳ ಒಮ್ಮೆ ಒಎಂಸಿಗಳು ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ.

ಜಾಗತಿಕ ಕಚ್ಚಾ ಮತ್ತೆ ಬ್ಯಾರೆಲ್ 66 ಡಾಲರ್​ ಗಡಿ ದಾಟಿದ್ದು, ಕೆಲವು ದಿನಗಳವರೆಗೆ ಮುಂದುವರಿದರೆ ಇಂಧನ ಬೆಲೆಗಳನ್ನು ಮೇಲ್ಮುಖವಾಗಬಹುದು. ಈ ದೀರ್ಘ ವಿರಾಮಕ್ಕೆ ಮುನ್ನ, ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ಮಾರ್ಚ್ 30ರಂದು ಪ್ರತಿ ಲೀಟರ್‌ಗೆ 22 ಪೈಸೆ ಮತ್ತು 23 ಪೈಸೆ ಇಳಿಕೆ ಆಗಿದ್ದವು.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗುರುವಾರ ಕುಸಿದವು. ಆದರೆ, ಅದರ ಚಿಲ್ಲರೆ ಮಟ್ಟವು ಆಯಾ ರಾಜ್ಯಗಳಲ್ಲಿನ ಸ್ಥಳೀಯ ಸುಂಕದ ಮಟ್ಟ ಅವಲಂಬಿಸಿ ಬದಲಾಗಲಿವೆ. ಆದರೂ ಪ್ರೀಮಿಯಂ ಪೆಟ್ರೋಲ್ ಮುಂಬೈ ಮತ್ತು ದೇಶಾದ್ಯಂತ ಹಲವು ನಗರಗಳಲ್ಲಿ ಲೀಟರ್ 100 ರೂ.ಗಳಷ್ಟಿದೆ.

ABOUT THE AUTHOR

...view details