ಕರ್ನಾಟಕ

karnataka

ETV Bharat / business

ಜೇಬು ಸುಡುತ್ತಿದೆ ಇಂಧನ ದರ: ಕರ್ನಾಟಕದಲ್ಲೂ ಶತಕದ ಸಮೀಪ ಪೆಟ್ರೋಲ್‌ ಬೆಲೆ - ಇಂದಿನ ಡೀಸೆಲ್ ದರ

ಕರ್ನಾಟಕದಲ್ಲೂ ಸಹ ಪೆಟ್ರೋಲ್ ದರ ಸೆಂಚುರಿ ಸನಿಹದಲ್ಲಿ ಬಂದು ನಿಂತಿದೆ. ಬಳ್ಳಾರಿಯಲ್ಲಿ ಪೆಟ್ರೋಲ್​ ಲೀಟರ್​ಗೆ ಅತ್ಯಧಿಕ 99.83 ರೂ.ಗೆ ಮಾರಾಟ ಆಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.98 ರೂ. ಮತ್ತು ಡೀಸೆಲ್ 90.87 ರೂ.ಯಲ್ಲಿ ಖರೀದಿ ಆಗುತ್ತಿದೆ.

Petrol
Petrol

By

Published : Jun 4, 2021, 1:04 PM IST

ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಪೆಟ್ರೋಲ್ ಬೆಲೆ ಲೇಹ್‌ನಲ್ಲಿ ಪ್ರತಿ ಲೀಟರ್‌ಗೆ 100 ರೂ. ದಾಟಿದೆ. ಆಂಧ್ರಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಶುಕ್ರವಾರ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ.

ಕರ್ನಾಟಕದಲ್ಲೂ ಸಹ ಪೆಟ್ರೋಲ್ ದರ ಸೆಂಚುರಿ ಸನಿಹದಲ್ಲಿ ಬಂದು ನಿಂತಿದೆ. ಬಳ್ಳಾರಿಯಲ್ಲಿ ಪೆಟ್ರೋಲ್​ ಲೀಟರ್​ಗೆ ಅತ್ಯಧಿಕ 99.83 ರೂ.ಗೆ ಮಾರಾಟ ಆಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.98 ರೂ. ಮತ್ತು ಡೀಸೆಲ್ 90.87 ರೂ.ಯಲ್ಲಿ ಖರೀದಿ ಆಗುತ್ತಿದೆ.

ಇದನ್ನೂ ಓದಿ: ಕೊರೊನಾ 2.0 ಹೊಡೆತಕ್ಕೆ ತಲೆಕೆಳಗಾದ RBIನ ಆರ್ಥಿಕ ಬೆಳವಣಿಗೆ ಅಂದಾಜು

ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆಯಲ್ಲಿ 18 ದಿನಗಳ ವಿರಾಮ ನೀಡಿದ್ದವು. ಮೇ 4ರಿಂದ ಶುಕ್ರವಾರದ ತನಕ 18 ಬಾರಿ ಏರಿಕೆ ಮಾಡಿವೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 27 ಪೈಸೆ ಮತ್ತು ಲೀಟರ್‌ಗೆ 28 ​​ಪೈಸೆ ಹೆಚ್ಚಿಸಲಾಗಿದೆ. ದೇಶಾದ್ಯಂತ ಇಂಧನ ಬೆಲೆಗಳನ್ನು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ.

ದೆಹಲಿಯಲ್ಲಿ ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ 94.76 ರೂ.ಗೆ ತಲುಪಿದ್ದರೆ, ಡೀಸೆಲ್ ಈಗ ಲೀಟರ್​ಗೆ 85.66 ರೂ. ಆಗಿದೆ. ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ದೇಶದಲ್ಲಿ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸುವ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಿಂತ ಹೆಚ್ಚಾಗಿದೆ.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಲೇಹ್‌ ಪ್ರದೇಶಗಳಲ್ಲೂ ಇಂಧನ ದರಗಳು ಏರಿಕೆಯಾಗಿವೆ. ವೈಜಾಗ್ ಹೊರತುಪಡಿಸಿ ಆಂಧ್ರಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ.ಗೆ ಮಾರಾಟವಾಗಿದೆ. ವೈಜಾಗ್‌ನಲ್ಲಿರುವ ಡೀಸೆಲ್‌ನ ಬೆಲೆ ಪ್ರತಿ ಲೀಟರ್‌ಗೆ 94.08 ರೂ.ಯಷ್ಟಿದೆ. ತೆಲಂಗಾಣದ ಆದಿಲಾಬಾದ್​ನಲ್ಲಿ ಪೆಟ್ರೋಲ್ ಬೆಲೆ 100.57 ರೂ. ಮತ್ತು ನಿಜಾಮಾಬಾದ್​ನಲ್ಲಿ 100.17 ರೂ.ಯಷ್ಟಾಗಿದೆ.

ABOUT THE AUTHOR

...view details