ನವದೆಹಲಿ: ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ಸಂಸ್ಥೆಯಾದ ಪೇಟಿಎಂ(PAYTM) ಭಾನುವಾರ (ಸೆ.30 ರಂದು ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ) ಒಟ್ಟು ವ್ಯಾಪಾರದ ಮೌಲ್ಯದಲ್ಲಿ ಎರಡು ಪಟ್ಟು ಹೆಚ್ಚು ಏರಿಕೆ ದಾಖಲಿಸಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (Bombay Stock Exchange -BSE) ನಲ್ಲಿ ಕಂಪನಿಯ ಒಟ್ಟಾರೆ ಮೌಲ್ಯ 1,95,600 ಕೋಟಿ ರೂ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯ ಮೌಲ್ಯ 94,700 ಕೋಟಿ ರೂ. ದಾಖಲಿಸಿತ್ತು.
ಪೇಟಿಎಂ ಜಿಎಂವಿ (Paytm GMV) ಅದರ ಅಪ್ಲಿಕೇಶನ್‌ನಲ್ಲಿನ ವಹಿವಾಟು ಹಾಗೂ ಪಾವತಿ ಸಾಧನಗಳ ಮೂಲಕ ಒಂದು ಅವಧಿಯಲ್ಲಿ ಮಾಡಿದ ಒಟ್ಟು ಪಾವತಿಗಳ ಮೌಲ್ಯವನ್ನು ಇದು ಸೂಚಿಸುತ್ತದೆ. ಹಣ ವರ್ಗಾವಣೆಯಂತಹ ಗ್ರಾಹಕ ಪಾವತಿ ಸೇವೆಗಳನ್ನು ಹೊರತುಪಡಿಸಿದೆ ಕಂಪನಿ ಮೌಲ್ಯವಾಗಿದೆ.
ಕಂಪನಿ ಅಕ್ಟೋಬರ್‌ನಲ್ಲಿ GMVಯಲ್ಲಿ 131 ಶೇ.ಬೆಳವಣಿಗೆಯನ್ನು 83,200 ಕೋಟಿ ರೂ. ಎಂದು ವರದಿ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಿಸಿದ 36,000 ಕೋಟಿ ರೂ.ಗಳಿಗೆ ಹೋಲಿಸಿದರೆ ಕಂಪನಿ ಸಲ್ಲಿಸಿದ ಹಣಕಾಸು ಮಾಹಿತಿಗಳ ಪ್ರಕಾರ ಪೇಟಿಎಂ ಪ್ಲಾಟ್‌ಫಾರ್ಮ್‌ನಲ್ಲಿ ಮಾಸಿಕ ವಹಿವಾಟು ನಡೆಸುವ ಬಳಕೆದಾರರು ಜುಲೈ - ಸೆಪ್ಟೆಂಬರ್ 2021 ತ್ರೈಮಾಸಿಕದಲ್ಲಿ 4.3 ಕೋಟಿಯಿಂದ 5.7 ಕೋಟಿಗೆ ಏರಿಕೆ ಆಗಿದ್ದು, ಇದು ಶೇ.33ರಷ್ಟು ಹೆಚ್ಚಳವಾಗಿದೆ.