ಹೈದರಾಬಾದ್:ಬ್ಯಾಂಕಿಂಗ್ ವಲಯದಲ್ಲಿ ಇಂದಿನಿಂದ ಮಹತ್ವದ ಬದಲಾವಣೆಗಳಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ನ ಈ ಹೊಸ ನಿಯಮಗಳು ಇಂದಿನಿಂದಲೇ ಜಾರಿಯಾಗಿವೆ. ಪ್ರಮುಖವಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೇಲೂ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ.
1. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಮೊಬೈಲ್ ವ್ಯಾಲೆಟ್ ಬಳಸಿ ಆಟೋ - ಡೆಬಿಟ್ ಪೇಮೆಂಟ್ ವ್ಯವಸ್ಥೆ ಮಾಡುವುದಿದ್ದರೆ ಬ್ಯಾಂಕ್‌ಗಳು 24 ಗಂಟೆ ಮೊದಲು ಗ್ರಾಹಕರಿಗೆ ಸೂಚನೆ ನೀಡಬೇಕಾಗುತ್ತದೆ. ಗ್ರಾಹಕರು ಒಪ್ಪಿಗೆ ನೀಡಿದ ಬಳಿಕವೇ ಹಣ ಕಡಿತವಾಗಲಿದೆ. 5,000 ರೂ.ಗಿಂತಲೂ ಮೇಲ್ಪಟ್ಟ ಮೊತ್ತದ ಕಡಿತಕ್ಕೆ ಇದು ಅನ್ವಯ.
2. ಆಟೋ ಡೆಬಿಟ್ ಪಾವತಿ ವ್ಯವಸ್ಥೆ ಅಡಿಯಲ್ಲಿ ಬ್ಯಾಂಕ್‌ಗಳು ಡಿಜಿಟಲ್ ಪ್ಲಾಟ್ಫಾರ್ಮ್/ ಸ್ವಯಂಚಾಲಿತ ಬಿಲ್ ಪಾವತಿಗೆ ಹಣ ಡೆಬಿಟ್ ಮಾಡುವ ಮೊದಲು ಅನುಮತಿ ಪಡೆದುಕೊಳ್ಳಬೇಕು. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಮಾಸಿಕ ಸ್ವಯಂ-ಡೆಬಿಟ್ ವಹಿವಾಟು ಚಂದಾದಾರರು ಗ್ರಾಹಕರ ಅನುಮತಿ ಇಲ್ಲದೇ ಹಣ ಪಡೆದುಕೊಳ್ಳುವಂತಿಲ್ಲ. ಎಸ್‌ಎಂಎಸ್ (SMS) ಅಥವಾ ಇ-ಮೇಲ್ ರೂಪದಲ್ಲಿ ನಮಗೆ ಮೊದಲೇ ಸಂದೇಶ ಕಳುಹಿಸಬೇಕು.