ಮುಂಬೈ:ಏಷ್ಯಾದ ನಂ. ಶ್ರೀಮಂತ/ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಜಾಗತಿಕ ಮಾರುಕಟ್ಟೆಯಲ್ಲಿನ ಋಣಾತ್ಮಕ ಪರಿಣಾಮದಿಂದ ಒಂದೇ ದಿನದಲ್ಲಿ ಅಂದಾಜು 17 ಸಾವಿರ ಕೋಟಿ ಸಂಪತ್ತು ಕಳೆದುಕೊಂಡಿದ್ದಾರೆ.
ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರದ ಮಾತಿನ ಸಮರ ಸೋಮವಾರದಂದು ಅಮೆರಿಕದ ವಾಲ್ ಸ್ಟ್ರೀಟ್ ಡೌ ಜೋನ್ಸ್ ಸರಾಸರಿ 767 ಅಂಶಗಳ ಕುಸಿತ ದಾಖಲಿಸಿದೆ. ಎಸ್ ಆ್ಯಂಡ್ ಪಿ 500 ಸೂಚ್ಯಂಕ ಇಳಿಕೆಯಾಗಿ ಶೇ 3ರಷ್ಟು ಕ್ಷೀಣಿಸಿದೆ. ಈ ವರ್ಷದಲ್ಲಿ ಸೋಮವಾರದ ಪೇಟೆಯು ಅತಿದೊಡ್ಡ ಕುಸಿತದ ದಾಖಲೆಗೆ ಸಾಕ್ಷಿಯಾಗಿದ್ದು, ಜಗತ್ತಿನ 500 ಶ್ರೀಮಂತರ ಮೇಲೆ ಇದರ ನೇರ ಪರಿಣಾಮ ಬೀರಿದೆ. ಇದರಲ್ಲಿ ಏಷ್ಯಾದ ನಂ. ಕುಬೇರ ಮುಖೇಶ್ ಅಂಬಾನಿಯೂ ಸೇರಿದ್ದಾರೆ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಫ್ರಾನ್ಸ್‌ನ ಎಲ್ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಟಾಪ್ ಲಾಸ್ ಆದವರ ಸಾಲಿನಲ್ಲಿದ್ದಾರೆ. ಒಟ್ಟಾರೆ ವಿಶ್ವದ ಟಾಪ್ ಶ್ರೀಮಂತರು ಸುಮಾರು 8 ಲಕ್ಷ ಕೋಟಿ ಅಂದರೆ 117 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಭಾರತೀಯ ಉದ್ಯಮಿಗಳಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿದವರಲ್ಲಿ ಮುಖೇಶ್ ಅಂಬಾನಿ 2.45 ಬಿಲಿಯನ್ ಡಾಲರ್ (17 ಸಾವಿರ ಕೋಟಿ ರೂ.) ಮುಖೇನ ನಂ.1 ಸ್ಥಾನದಲ್ಲಿದ್ದಾರೆ. ಅಜೀಮ್ ಪ್ರೇಮ್ಜೀ, ಶಿವ ನಾಡರ್, ಉದಯ್ ಕೋಟಕ್, ಗೌತಮ್ ಅದಾನಿ, ರಾಧಾ ಕಿಶನ್ ದಮಾನಿ, ಸೈರಸ್ ಪೂನವಾಲ್ಲಾ, ಸಾವಿತ್ರಿ ಜಿಂದಾಲ್ ಸೇರಿ 17 ಉದ್ಯಮಿಗಳಿದ್ದಾರೆ.