ನವದೆಹಲಿ:ದೇಶದ ಅತಿದೊಡ್ಡ ಕಾರುಗಳ ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ), ತನ್ನ ಕಾರುಗಳು ದರವನ್ನು ಏರಿಕೆ ಮಾಡಿದೆ.
ಕಾರ್ ಹೊಂದುವವರಿಗೆ ಶಾಕ್... ಟಾಟಾ ಮೋಟಾರ್ಸ್ ಬಳಿಕ ಮಾರುತಿ ಕಾರ್ ದರ ಏರಿಕೆ..!
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಎಲ್ಲ ಮಾರುತಿ ಕಾರುಗಳ ಮೇಲೆ ₹ 689 ದರ ಏರಿಸಲಾಗಿದೆ. (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಪ್ರಯುಕ್ತ ದರ ಹೆಚ್ಚಿಸುತ್ತಿದ್ದೇವೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಸಾಂದರ್ಭಿಕ ಚಿತ್ರ
ನೂತನ ದರವು ದೇಶಾದ್ಯಂತ ಮಾರಾಟವಾಗುವ ಎಲ್ಲ ಕಾರ್ ಉತ್ಪನ್ನಗಳ ಎಕ್ಸ್ ಶೋ ರೂಂ ಬೆಲೆ ಮೇಲೆ ಅನ್ವಯವಾಗಲಿದೆ. ಮಾರುತಿ ಸುಜೂಕಿ ಆಲ್ಟೋ 800ನಿಂದ ಎಸ್- ಕ್ರಾಸ್ ಕಾರುಗಳನ್ನು ತಯಾರಿಸುತ್ತಿದ್ದು, ₹ 2.67 ಲಕ್ಷ ದಿಂದ ₹ 11.48 ಲಕ್ಷದವರೆಗೆ ದರದ ನಡುವೆ ಮಾರಾಟ ಆಗುತ್ತಿವೆ.
ಭದ್ರತೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸುಪ್ರೀಂಕೋರ್ಟ್ ಎಲ್ಲ ವಾಹನಗಳಿಗೆ ಏಕರೂಪದ ಹೈ - ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸಲು ಆದೇಶಿಸಿದೆ. ಕೋರ್ಟ್ನ ಈ ಆದೇಶ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.