ಕರ್ನಾಟಕ

karnataka

ETV Bharat / business

ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಫಲಿತಾಂಶಕ್ಕೆ ಜಿಗಿದ ಸೆನ್ಸೆಕ್ಸ್ ಗೂಳಿ!

ದಿನದ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​ 194.90 ಅಂಕ ಏರಿಕೆಯಾಗಿ 44,077.15 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 67.40 ಅಂಕ ಹೆಚ್ಚಳವಾಗಿ 12,926.45 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

Market
ಮಾರುಕಟ್ಟೆ

By

Published : Nov 23, 2020, 7:33 PM IST

ಮುಂಬೈ: ಮತ್ತೊಂದು ಕೋವಿಡ್​ -19 ಲಸಿಕೆ ಸಕಾರಾತ್ಮಕ ಫಲಿತಾಂಶ ವರದಿಯು ಜಾಗತಿಕ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದ್ದರಿಂದ ಈಕ್ವಿಟಿ ಬೆಂಚ್​​ಮಾರ್ಕ್​ ವಾರದ ಆರಂಭಿಕ ಸೋಮವಾರದ ವಹಿವಾಟಿನಿಂದು ಏರಿಕೆ ದಾಖಲಿಸಿತು.

ಡಾಲರ್​ ವಿರುದ್ಧ ಚೇತರಿಸಿಕೊಳ್ಳುತ್ತಿರುವ ರೂಪಾಯಿ ಮತ್ತು ತಡೆಯಿಲ್ಲದ ಒಳಹರಿದು ಬರುತ್ತಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಆವೇಗವು ಹೂಡಿಕೆದಾರರ ಖರೀದಿ ಮನೋಭಾವ ವೃದ್ಧಿಸಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ದಿನದ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​ 194.90 ಅಂಕ ಏರಿಕೆಯಾಗಿ 44,077.15 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 67.40 ಅಂಕ ಹೆಚ್ಚಳವಾಗಿ 12,926.45 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ಸೆನ್ಸೆಕ್ಸ್ ವಿಭಾಗದಲ್ಲಿ ಒಎನ್‌ಜಿಸಿ ಷೇರು ಮೌಲ್ಯ ಶೇ .6.84ರಷ್ಟು ಏರಿಕೆ ಕಂಡಿದ್ದರೇ ಇಂಡಸ್ಇಂಡ್ ಬ್ಯಾಂಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಸಿಎಲ್ ಟೆಕ್ ಮತ್ತು ಟಿಸಿಎಸ್ ನಂತರದ ಸ್ಥಾನದಲ್ಲಿವೆ.

ಫ್ಯೂಚರ್ ಗ್ರೂಪ್‌ನ ಚಿಲ್ಲರೆ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಸ್ಪರ್ಧಾ ಆಯೋಗ ಅನುಮೋದನೆ ನೀಡಿದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ 2.72ರಷ್ಟು ಏರಿಕೆಯಾಗಿದೆ. ಮತ್ತೊಂದೆಡೆ ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಎಂ&ಎಂ ಶೇ 3.55ರಷ್ಟು ಪ್ರಮಾಣದಲ್ಲಿ ಕುಸಿದವು.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ತಮ್ಮ ಕೋವಿಡ್​-19 ಲಸಿಕೆ ಮೆಂಬರ್, ಕೊರೊನಾ​​ ರೋಗ ತಡೆಗಟ್ಟುವಲ್ಲಿ ಶೇ 90ರಷ್ಟು ಪರಿಣಾಮಕಾರಿ ಎಂದು ಘೋಷಿಸಿತು. ಈ ನಂತರ ಜಾಗತಿಕ ಷೇರುಗಳು ಏರುಗತಿಯಲ್ಲಿ ಸಾಗಿದವು.

ABOUT THE AUTHOR

...view details