ಕರ್ನಾಟಕ

karnataka

ETV Bharat / business

ಮಾರಾಟದ ಒತ್ತಡಕ್ಕೆ ಮಣಿದ ಗೂಳಿ: ಮಧ್ಯಾಹ್ನದ ವೇಳೆಗೆ 1,000 ಅಂಕ ಕುಸಿದ ಸೆನ್ಸೆಕ್ಸ್​! - ನಿಫ್ಟಿ

ಮಧ್ಯಾಹ್ನ 2:43ರ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 1,021.78 ಅಂಕ ಅಥವಾ ಶೇ. 2.59ರಷ್ಟು ಕುಸಿದು 38,445.53 ಅಂಕಗಳಿಗೆ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 308.00 ಅಂಕ ಅಥವಾ ಶೇ. 2.64ರಷ್ಟು ಇಳಿಕೆ ಕಂಡು 11,339.60 ಅಂಕಗಳಿಗೆ ತಲುಪಿತು.

Sensex
ಸೆನ್ಸೆಕ್ಸ್​

By

Published : Aug 31, 2020, 3:22 PM IST

ಮುಂಬೈ: ಬ್ಯಾಂಕಿಂಗ್ ಮತ್ತು ಹಣಕಾಸು ವಿಭಾಗದ ಷೇರುಗಳಲ್ಲಿ ಲಾಭದ ಬುಕ್ಕಿಂಗ್​​ ವೇಗ ಆಗುತ್ತಿದ್ದಂತೆ ಈಕ್ವಿಟಿ ಬೆಂಚ್‌ ಮಾರ್ಕ್ ಸೂಚ್ಯಂಕಗಳು ಆರಂಭಿಕ ಲಾಭದಿಂದ ಮಧ್ಯಾಹ್ನದ ವೇಳೆಗೆ ನಕಾರಾತ್ಮಕದತ್ತ ಹೊರಳಿದವು.

ಮಧ್ಯಾಹ್ನ 2:43ರ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 1,021.78 ಅಂಕ ಅಥವಾ ಶೇ. 2.59ರಷ್ಟು ಕುಸಿದು 38,445.53 ಅಂಕಗಳಿಗೆ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 308.00 ಅಂಕ ಅಥವಾ ಶೇ. 2.64ರಷ್ಟು ಇಳಿಕೆ ಕಂಡು 11,339.60 ಅಂಕಗಳಿಗೆ ತಲುಪಿತು.

ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 353.84 ಏರಿಕೆ ಕಂಡು 39,467.31 ಅಂಕಗಳಿಗೆ ತಲುಪಿದ್ದರೆ, ನಿಫ್ಟಿ 88.35 ಅಂಕ ಏರಿಕೆ ಕಂಡು 11,647.60 ಅಂಕಗಳಲ್ಲಿ ಕೊನೆಗೊಂಡಿತ್ತು.

ABOUT THE AUTHOR

...view details