ಮುಂಬೈ: ಕೊರೊನಾ ವೈರಸ್ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದರಿಂದ ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತವಾಗಿದೆ.
ಕೊರೊನಾ ಎಫೆಕ್ಟ್: ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತ
ಕೊರೊನಾ ವೈರಸ್ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದರಿಂದ ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತವಾಗಿದೆ.
ಮುಂಬೈ ಷೇರುಪೇಟೆ
ಇಂದಿನ ವಹಿವಾಟಿನ ಆರಂಭದಲ್ಲೇ ಷೇರುಪೇಟೆ ಭಾರೀ ಕುಸಿತ ಅನುಭವಿಸಿದೆ. ನಿಫ್ಟಿ 8,000ಕ್ಕಿಂತ ಕಡಿಮೆ ಇದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1096.15 ಪಾಯಿಂಟ್‌ಗಳ ವಹಿವಾಟು ನಡೆಸಿದ್ದು, 27,773.36ಕ್ಕೆ ತಲುಪಿದೆ. ಅಂತೆಯೇ ಎನ್‌ಎಸ್‌ಇ ನಿಫ್ಟಿ ಆರಂಭದಲ್ಲೇ 405.50 ಅಂಕ ಇಳಿಕೆ ಕಂಡು 8,063.30ಕ್ಕೆ ತಲುಪಿದೆ.
ಜಗತ್ತಿನಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್, ಜಾಗತಿಕ ವಹಿವಾಟಿನ ಮೇಲೂ ದುಷ್ಪರಿಣಾಮ ಬೀರಿದ್ದು, ದಿನದಿಂದ ದಿನಕ್ಕೆ ಷೇರುಪೇಟೆ ಭಾರೀ ಕುಸಿತದತ್ತ ಸಾಗುತ್ತಿದೆ.