ಕರ್ನಾಟಕ

karnataka

ETV Bharat / business

ಭಾರತದಲ್ಲಿ ಐಫೋನ್​​ 11 ಸರಣಿಗೆ ಉತ್ತಮ ಸ್ಪಂದನೆ... ಆ್ಯಪಲ್ ಮೊಬೈಲ್​ ಕೊಳ್ಳಲು ಮುಗಿಬಿದ್ದ ಜನತೆ - ಐಪೋನ್ 11 ಸರಣಿಯ ಮೊಬೈಲ್​

ಹಬ್ಬದ ಸಮಯ ಹಾಗೂ ಪ್ರಮುಖ ಆನ್​ಲೈನ್​ ತಾಣಗಳ ಭಾರಿ ರಿಯಾಯಿತಿ ಮಾರಾಟ ಸದ್ಯ ಐಫೋನ್​​ ಬೇಡಿಕೆ ಏರಿಕೆಗೆ ವರವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಐಫೋನ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ಗ್ರಾಹಕರು

By

Published : Sep 29, 2019, 8:25 PM IST

ನವದೆಹಲಿ:ಐಪೋನ್ 11 ಸರಣಿಯ ಮೊಬೈಲ್​ಗಳ ಮೂಲಕ ದಿಗ್ಗಜ ಮೊಬೈಲ್ ಸಂಸ್ಥೆ ಆ್ಯಪಲ್ ಮತ್ತೆ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದೆ. ಕೆಲ ವಾರಗಳ ಹಿಂದೆ ಅನಾವರಣವಾಗಿದ್ದ ಐಫೋನ್ 11 ಸರಣಿಯ ಮೊಬೈಲ್​ಗಳು ಶುಕ್ರವಾರದಿಂದ ಭಾರತದಲ್ಲಿ ಲಭ್ಯವಾಗುತ್ತಿವೆ.

ಹಬ್ಬದ ಸಮಯ ಹಾಗೂ ಪ್ರಮುಖ ಆನ್​ಲೈನ್​ ತಾಣಗಳ ಭಾರಿ ಡಿಸ್ಕೌಂಟ್ ಸೇಲ್ ಸದ್ಯ ಐಫೋನ್​​ ಬೇಡಿಕೆ ಏರಿಕೆಗೆ ವರವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಸೆ. 27ರಂದು ಭಾರತದ ಪ್ರಮುಖ ನಗರಗಳಲ್ಲಿ ಐಫೋನ್ 11 ಸರಣಿಯ ಮೊಬೈಲ್​ಗಳ ಖರೀದಿಗೆ ಗ್ರಾಹಕರು ಸರತಿ ಸಾಲಿನಲ್ಲಿದ್ದಿದ್ದು ಕಂಡುಬಂದಿದೆ. ದೆಹಲಿ, ಬೆಂಗಳೂರು ನಗರಗಳಲ್ಲಿ ಐಫೋನ್ ಪ್ರಿಯರು ದಿನವಿಡೀ ಕ್ಯೂನಲ್ಲಿ ನಿಂತು ಮೊಬೈಲ್ ಖರೀದಿ ಮಾಡಿದ್ದಾರೆ.

ಐಫೋನ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ಗ್ರಾಹಕರು

ಸೆ. 20ರಂದು ಮುಂಗಡ ಬುಕ್ಕಿಂಗ್​ ತೆರೆದಿದ್ದ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ ಉತ್ತಮ ರೆಸ್ಪಾನ್ಸ್ ಪಡೆದಿವೆ. ಮೂರೇ ದಿನದಲ್ಲಿ ಎರಡೂ ಆನ್​ಲೈನ್​ ತಾಣದಲ್ಲಿ ಐಫೋನ್​ 11 ಸರಣಿಯ ಮೊಬೈಲ್​ಗಳು ಔಟ್​ ಆಫ್​​ ಸ್ಟಾಕ್ ಆಗಿದ್ದವು.

ಅಮೇಜಾನ್ ಹಾಗೂ ಫ್ಲಿಪ್​ಕಾರ್ಟ್​ ಎರಡರಲ್ಲೂ ಐಫೋನ್ ನೂತನ ಮೊಬೈಲ್​ಗಳು ಒಂದಷ್ಟು ಡಿಸ್ಕೌಂಟ್ ಮೂಲಕ ಲಭ್ಯವಿವೆ. ಹೀಗಾಗಿ ಬೇಡಿಕೆ ಉತ್ತಮವಾಗಿದೆ ಎನ್ನುವ ಮಾತುಗಳೂ ಕೇಳಿಬಂದಿವೆ.

ಭಾರತದ ಹೊರತಾಗಿ ಐಫೋನ್​ ಮೊಬೈಲ್​ಗಳಿಗೆ ಉತ್ತಮ ಬೇಡಿಕೆ ಇರುವ ದೇಶವೆಂದರೆ ಅದು ಚೀನಾ. ಚೀನಾದಲ್ಲಿ ಭಾರತಕ್ಕೂ ಮುನ್ನವೇ ಸೇಲ್ ಆರಂಭವಾಗಿತ್ತು. ಆದರೆ ಚೀನಾದ ಮಂದಿ ಐಫೋನ್ ಹೊಸ ಮೊಬೈಲ್ ಮೇಲೆ ನೀರಸ ಪ್ರತಿಕ್ರಿಯೆ ತೋರಿದ್ದಾರೆ.

ABOUT THE AUTHOR

...view details