ನವದೆಹಲಿ: ಜಾಗತಿಕ ಪ್ರವೃತ್ತಿಗಳ ಹಿನ್ನೆಲೆಯಲ್ಲಿ ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ 10 ಗ್ರಾಂಗೆ 109 ರೂ. ಇಳಿದು 48,183 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆಯಾಗಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಹಳದಿ ಲೋಹವು 10 ಗ್ರಾಂಗೆ ಗರಿಷ್ಠ 48,292 ರೂ.ಗೆ ಮಾರಾಟ ಆಗುತ್ತಿತ್ತು. ಬೆಳ್ಳಿ ಕೂಡ ಕೆಜಿಗೆ 65,177 ರೂ. ಮೇಲೆ 146 ರೂ. ಇಳಿದು 65,031 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,840.79 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 25.12 ಡಾಲರ್‌ನಲ್ಲಿ ಮಾರಾಟ ಆಗುತ್ತಿದೆ.