ಕರ್ನಾಟಕ

karnataka

ಒಂದೇ ದಿನ 1,043 ರೂ. ಜಿಗಿದ ಬೆಳ್ಳಿ: ಬಂಗಾರ ದರದಲ್ಲಿಯೂ ಏರಿಕೆ..

By

Published : May 26, 2021, 5:46 PM IST

ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ ಗರಿಷ್ಠ 48,062 ರೂ.ಯಲ್ಲಿ ಖರೀದಿ ಆಗುತ್ತಿತ್ತು. ಇಂದು 527 ರೂ. ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯ ಮೇಲೆ 1,043 ರೂ. ಹೆಚ್ಚಳವಾಗಿ 71,775 ರೂ.ಯಷ್ಟಾಗಿದೆ. ಯಥೇಚ್ಛ ಬೇಡಿಕೆಯಿಂದಾಗಿ ಬೆಳ್ಳಿ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,908 ಡಾಲರ್‌ ಮತ್ತು ಬೆಳ್ಳಿ ಔನ್ಸ್‌ಗೆ 28.07 ಡಾಲರ್‌ಗಳಲ್ಲಿ ವಹಿವಾಟು ನಡೆಸುತ್ತಿದೆ.

Gold
Gold

ನವದೆಹಲಿ :ಜಾಗತಿಕ ಅಮೂಲ್ಯವಾದ ಲೋಹದ ಬೆಲೆಯಲ್ಲಿನ ಲಾಭದ ತತ್ಪರಿಣಾಮ ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ.ಗೆ 527 ರೂ. ಹೆಚ್ಚಳವಾಗಿ 48,589 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ ಗರಿಷ್ಠ 48,062 ರೂ.ಯಲ್ಲಿ ಖರೀದಿ ಆಗುತ್ತಿತ್ತು. ಇಂದು 527 ರೂ. ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯ ಮೇಲೆ 1,043 ರೂ. ಹೆಚ್ಚಳವಾಗಿ 71,775 ರೂ.ಯಷ್ಟಾಗಿದೆ. ಯಥೇಚ್ಛ ಬೇಡಿಕೆಯಿಂದಾಗಿ ಬೆಳ್ಳಿ ಬೆಲೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,908 ಡಾಲರ್‌ ಮತ್ತು ಬೆಳ್ಳಿ ಔನ್ಸ್‌ಗೆ 28.07 ಡಾಲರ್‌ಗಳಲ್ಲಿ ವಹಿವಾಟು ನಡೆಸುತ್ತಿದೆ. ಜನವರಿಯಿಂದ ಡಾಲರ್ ಸೂಚ್ಯಂಕ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.

ಆದರೆ, ಅಮೆರಿಕ 10 ವರ್ಷಗಳ ಖಜಾನೆ ಇಳುವರಿ ಶೇ 1.56ಕ್ಕೆ ಇಳಿದಿದೆ. ಇದು ಅಮೂಲ್ಯ ಲೋಹಗಳ ಖರೀದಿ ಹೆಚ್ಚಿಸುತ್ತದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದರು.

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಉಪಾಧ್ಯಕ್ಷ (ಸರಕುಗಳ ಸಂಶೋಧನೆ) ನವನೀತ್ ದಮಾನಿ, ಚಿನ್ನದ ಬೆಲೆಗಳು ಹೆಚ್ಚಿನ ವಹಿವಾಟು ಮುಂದುವರೆಸಿದೆ. ಏಕೆಂದರೆ, ಇದು ಅಮೆರಿಕ ಖಜಾನೆ ಇಳುವರಿ ಮತ್ತು ದುರ್ಬಲ ಡಾಲರ್ ಕುಸಿತದ ಮಧ್ಯೆ ನಾಲ್ಕುವರೆ ತಿಂಗಳ ಗರಿಷ್ಠ ಮಟ್ಟದಲ್ಲಿ 1,900 ಡಾಲರ್​ ಮಟ್ಟವನ್ನು ಮೀರಿದೆ ಎಂದರು.

ABOUT THE AUTHOR

...view details