ಕರ್ನಾಟಕ

karnataka

ETV Bharat / business

ಒಂದೇ ದಿನದಲ್ಲಿ ₹ 1,150 ಕುಸಿದ ಬೆಳ್ಳಿ ದರ... ಚಿನ್ನದ ಬೆಲೆಯೆಷ್ಟು ಗೊತ್ತೆ?

ಬುಲಿಯನ್​ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆಯು ಕುಸಿದಿರುವುದರಿಂದ ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ₹ 1,150 ಕಡಿತವಾಗಿ ₹ 48,590ರಲ್ಲಿ ವಹಿವಾಟು ನಡೆಸುತ್ತಿದೆ. ಅತ್ಯಧಿಕ ಚಿನ್ನದ ಬೆಲೆ ಏರಿಕೆಯಿಂದಾಗಿ ಭೌತಿಕ ಮಾರುಕಟ್ಟೆಯಲ್ಲಿ ಹಬ್ಬಗಳ ದಿನಗಳಲ್ಲಿ ಕಂಡುಬರುವ ಬೇಡಿಕೆಯು ಇನ್ನೂ ಹೆಚ್ಚಳವಾಗಿಲ್ಲ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್​ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Sep 11, 2019, 8:37 PM IST

ನವದೆಹಲಿ:ಸಾಲು- ಸಾಲು ಹಬ್ಬಗಳ ಸೀಸನ್​ ಪ್ರಯುಕ್ತ ಕಂಡುಬರಲಿರುವ ಬೇಡಿಕೆಯ ಪೂರ್ವಭಾವಿಯಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ₹ 372 ಕುಸಿದು ಒಟ್ಟು ₹ 38,975 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ ಎಂದು ಎಚ್​ಡಿಎಫ್​ಸಿ ವಿಶ್ಲೇಷಿಸಿ ತಿಳಿಸಿದೆ.

ಬುಲಿಯನ್​ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆಯು ಕುಸಿದಿರುವುದರಿಂದ ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ₹ 1,150 ಕಡಿತವಾಗಿ ₹ 48,590ರಲ್ಲಿ ವಹಿವಾಟು ನಡೆಸುತ್ತಿದೆ.

ಅತ್ಯಧಿಕ ಚಿನ್ನದ ಬೆಲೆ ಏರಿಕೆಯಿಂದಾಗಿ ಭೌತಿಕ ಮಾರುಕಟ್ಟೆಯಲ್ಲಿ ಹಬ್ಬಗಳ ದಿನಗಳಲ್ಲಿ ಕಂಡುಬರುವ ಬೇಡಿಕೆಯು ಇನ್ನೂ ಹೆಚ್ಚಳವಾಗಿಲ್ಲ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್​ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯ ನ್ಯೂಯಾರ್ಕ್​ನಲ್ಲಿ ಚಿನ್ನದ ಪ್ರತಿ ಔನ್ಸ್​ 1,490 ಡಾಲರ್​​ ಮತ್ತು ಬೆಳ್ಳಿಯು 18.10 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಸಭೆಗೂ ಮುನ್ನ ಮತ್ತು ಅಮೆರಿಕ- ಚೀನಾ ವ್ಯಾಪಾರ ವ್ಯಾಜ್ಯಗಳ ಬಗ್ಗೆ ಸಕಾರಾತ್ಮಕ ಬೆಳವಣಿಗೆಯ ನಡುವೆ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.

ABOUT THE AUTHOR

...view details