ಮುಂಬೈ: ಜಾಗತಿಕ ಸಮುದಾಯದ ಭೌಗೋಳಿಕ ರಾಜಕೀಯ ಚಂಚಲತೆ, ಸುಸ್ಥಿರವಾದ ಕೇಂದ್ರೀಯ ಬ್ಯಾಂಕ್ಗಳ ಚಿನ್ನದ ಖರೀದಿ ಮತ್ತು ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ 2019ರ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಪ್ರತಿ 10 ಗ್ರಾಂ. ಚಿನ್ನದ ದರವು 42,000 ರೂ. ದಾಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹೊರಹೊಮ್ಮುತ್ತಿರುವ ಭೌಗೋಳಿಕ- ರಾಜಕೀಯ ಅನಿಶ್ಚಿತತೆಗಳು ಚಿನ್ನದ ದರವನ್ನು ಕಾಮೆಕ್ಸ್ ಮಾರುಕಟ್ಟೆಯಲ್ಲಿ 1,650 ಡಾಲರ್ ಮತ್ತು ಎಂಸಿಎಕ್ಸ್ನಲ್ಲಿ 42,000 ರೂ.ಗೆ ಏರಿಕೆ ಆಗಬಹುದು ಎಂದು ಕಾಮ್ಟ್ರೆಂಡ್ಜ್ ರಿಸರ್ಚ್ ಸಹ-ಸಂಸ್ಥಾಪಕ ಮತ್ತು ಸಿಇಒ ಜ್ಞಾನಶೇಖರ್ ತ್ಯಾಗರಾಜನ್ ಅಭಿಪ್ರಾಯಪಟ್ಟಿದ್ದಾರೆ.