ಕರ್ನಾಟಕ

karnataka

ETV Bharat / business

ಒಂದೇ ದಿನ 723 ರೂ. ಜಿಗಿದ ಚಿನ್ನ ; 10 ಗ್ರಾಂ. ಬಂಗಾರದ ದರವೆಷ್ಟು ಗೊತ್ತೇ?

ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ 104 ರೂ. ಇಳಿಕೆಯಾಗಿ ನಿನ್ನೆಯ 50,520 ರೂ. ಬೆಲೆಯಿಂದ 50,416 ರೂ.ಗೆ ತಲುಪಿದೆ. ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನವು 1,800 ಡಾಲರ್ ಮತ್ತು ಔನ್ಸ್‌ ಬೆಳ್ಳಿ ದರ 18.36 ಡಾಲರ್‌ನಷ್ಟಿದೆ..

ಚಿನ್ನ
Gold

By

Published : Jul 8, 2020, 8:27 PM IST

ನವದೆಹಲಿ :ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ದರ 723 ರೂಪಾಯಿ ಏರಿಕೆಯಾಗಿದೆ.

ಹೂಡಿಕೆಯ ಸುರಕ್ಷಿತ ಅಮೂಲ್ಯ ಲೋಹದತ್ತ ಒಲವು ಹಾಗೂ ರೂಪಾಯಿ ಸವಕಳಿಯ ಅಂತಾರಾಷ್ಟ್ರೀಯ ಬೆಲೆಗಳ ಲಾಭವನ್ನು ಪ್ರತಿಬಿಂಬಿಸುತ್ತದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ವಿಶ್ಲೇಷಿಸಿದೆ. ಮಂಗಳವಾರ 10 ಗ್ರಾಂ ಚಿನ್ನವು 49,175 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಬುಧವಾರದ ವಹಿವಾಟಿನಂದು 723 ರೂ. ಏರಿಕೆಯಾಗಿ 49,898 ರೂ.ಗೆ ತಲುಪಿದೆ.

ದೆಹಲಿಯ 24 ಕ್ಯಾರೆಟ್​ ಸ್ಪಾಟ್ ಚಿನ್ನದ ಬೆಲೆ 723 ರೂ. ಹೆಚ್ಚಳವಾಗಿದೆ. ಇದು ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳ ಮತ್ತು ರೂಪಾಯಿ ಕ್ಷೀಣಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್​ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ. ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯದಲ್ಲಿ 9 ಪೈಸೆ ಕುಸಿದಿದ್ದು, ₹75.02 (ತಾತ್ಕಾಲಿಕ) ತಲುಪಿತು.

ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ 104 ರೂ. ಇಳಿಕೆಯಾಗಿ ನಿನ್ನೆಯ 50,520 ರೂ. ಬೆಲೆಯಿಂದ 50,416 ರೂ.ಗೆ ತಲುಪಿದೆ. ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನವು 1,800 ಡಾಲರ್ ಮತ್ತು ಔನ್ಸ್‌ ಬೆಳ್ಳಿ ದರ 18.36 ಡಾಲರ್‌ನಷ್ಟಿದೆ.

ABOUT THE AUTHOR

...view details