ನವದೆಹಲಿ: ಚಿನ್ನದ ಫ್ಯೂಚರ್ ವಿತರಣೆಯ ದರವು ಶುಕ್ರವಾರದ ಚೀನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ. ಮೇಲೆ ಶೇ 0.11 ಇಳಿಕೆಯಾಗಿ 47,889 ರೂ.ಗೆ ತಲುಪಿದೆ.
ಅಲ್ಪ ಇಳಿಕೆ ಕಂಡ ಬಂಗಾರ ದರ: 10 ಗ್ರಾಂ.ಗೆ ಬೆಲೆ ಎಷ್ಟಾಗಿರಬಹದು? - ಎಂಸಿಎಕ್ಸ್
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) 13,791 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಆಗಸ್ಟ್ ವಿತರಣೆಯ ಚಿನ್ನದ ಬೆಲೆಯು 10 ಗ್ರಾಂ.ಗೆ 52 ರೂ. ಅಥವಾ 0.11ರಷ್ಟು ಇಳಿದು 47,889 ರೂ.ಯಲ್ಲಿ ಮಾರಾಟ ಆಗುತ್ತಿದೆ.
ಚಿನ್ನ
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ 13,791 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಆಗಸ್ಟ್ ವಿತರಣೆಯ ಚಿನ್ನದ ಬೆಲೆಯು 10 ಗ್ರಾಂ.ಗೆ 52 ರೂ. ಅಥವಾ 0.11ರಷ್ಟು ಇಳಿದು 47,889 ರೂ.ಯಲ್ಲಿ ಮಾರಾಟ ಆಗುತ್ತಿದೆ.
ಅಕ್ಟೋಬರ್ ವಿತರಣೆಯ ಹಳದಿ ಲೋಹವು 5,812 ಲಾಟ್‌ಗಳಲ್ಲಿ 10 ಗ್ರಾಂ.ಗೆ 36 ರೂ. ಅಥವಾ 0.07ರಷ್ಟು ಇಳಿಕೆಯಾಗಿದೆ. ನ್ಯೂಯಾರ್ಕ್ನಲ್ಲಿ ಪ್ರತಿ ಔನ್ಸ್ ಚಿನ್ನದ ಮೇಲೆ ಶೇ 0.02ರಷ್ಟು ಏರಿಕೆಯಾಗಿ 1,770.90 ಯುಎಸ್ ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.