ನವದೆಹಲಿ:ಜಾಗತಿಕ ಅಮೂಲ್ಯವಾದ ಲೋಹದ ಬೆಲೆಗಳ ಕುಸಿತಕ್ಕೆ ಅನುಗುಣವಾಗಿ ಚಿನ್ನವು ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 10 ಗ್ರಾಂ. ಮೇಲೆ 116 ರೂ. ಇಳಿದು 48,772 ರೂ.ಗೆ ಕುಸಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಇದು 10 ಗ್ರಾಂ.ಗೆ 48,888 ರೂ.ಯಷ್ಟು ಇತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 72,127 ರೂ.ಯಷ್ಟಿತ್ತು. ಇಂದು 1,291 ರೂ. ಇಳಿದು 70,836 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,898 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 27.74 ಡಾಲರ್‌ಗೆ ಸಮತಟ್ಟಾಗಿದೆ.
ಇದನ್ನೂ ಓದಿ: ಜೂ.4ರಂದು RBIನ ಹಣಕಾಸು ನೀತಿ ಸಮಿತಿ ಫಲಿತಾಂಶ ಪ್ರಕಟ: ಬಡ್ಡಿ ದರ ಏನಾಗಬಹುದು?
ಚಿನ್ನದ ಬೆಲೆಗಳು ಬುಧವಾರ ಔನ್ಸ್‌ಗೆ 1,898 ಡಾಲರ್‌ಗೆ ಕಾಮೆಕ್ಸ್ (ನ್ಯೂಯಾರ್ಕ್ ಮೂಲದ ಸರಕುಗಳ ವಿನಿಮಯ) ವಹಿವಾಟಿನಲ್ಲಿ ಸ್ಪಾಟ್ ಚಿನ್ನದ ಬೆಲೆಯೊಂದಿಗೆ ದುರ್ಬಲಗೊಂಡಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.