ನವದೆಹಲಿ:ದುರ್ಬಲ ಜಾಗತಿಕ ಪ್ರವೃತ್ತಿಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಗುರುವಾರ 10 ಗ್ರಾಂ.ಗೆ 369 ರೂ. ತಗ್ಗಿ 48,388 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಇದು 10 ಗ್ರಾಂ.ಗೆ 48,757 ರೂ.ಯಲ್ಲಿ ವಹಿವಾಟು ನಡೆಸಿತ್ತು. ಬೆಳ್ಳಿ 390 ರೂ.ಯುಷ್ಟಿ ಇಳಿದು ಪ್ರತಿ ಕೆ.ಜಿ.ಗೆ 64,534 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನವು ಔನ್ಸ್‌ಗೆ 1,842 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 25.21 ಡಾಲರ್‌ಗೆ ತಲುಪಿದೆ.