ಕರ್ನಾಟಕ

karnataka

ETV Bharat / business

ಡಾಲರ್​ಗೆ ರೂಪಾಯಿ ಪಂಚ್.. ಜಿಗಿದ ಬೆಳ್ಳಿ, ಕುಸಿದ ಬಂಗಾರ.. ಇಂದಿನ ಗೋಲ್ಡ್​ ರೇಟ್ ಹೀಗಿದೆ..

ಬುಧವಾರ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಮೆಚ್ಚುಗೆ ಗಳಿಸಿ 73.15ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,857 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 25.48 ಡಾಲರ್‌ಗಳಲ್ಲಿ ಸಮತಟ್ಟಾಗಿದೆ..

Gold
ಚಿನ್ನ

By

Published : Jan 13, 2021, 7:24 PM IST

ನವದೆಹಲಿ :ಡಾಲರ್ ಎದುರು ರೂಪಾಯಿ ಮೆಚ್ಚುಗೆ ಗಳಿಸಿದ ತತ್ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 10 ಗ್ರಾಂ. ಮೇಲೆ 108 ರೂ. ಇಳಿದು 48,877 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ ಗರಿಷ್ಠ 48,985 ರೂ.ಯಲ್ಲಿ ಕೊನೆಗೊಂಡಿತ್ತು. ಹಿಂದಿನ ವಹಿವಾಟಿಗಿಂತ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂ ಮೇಲೆ 144 ರೂ. ಹೆಚ್ಚಳವಾಗಿ 65,351 ರೂ.ಗೆ ತಲುಪಿದೆ.

ಬುಧವಾರ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಮೆಚ್ಚುಗೆ ಗಳಿಸಿ 73.15ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,857 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 25.48 ಡಾಲರ್‌ಗಳಲ್ಲಿ ಸಮತಟ್ಟಾಗಿದೆ.

ಇದನ್ನೂ ಓದಿ: ಕೊರೆವ ಚಳಿಯಲ್ಲಿ ಕುದುರೆ ಏರಿ ಪಾರ್ಸೆಲ್.. ಡಿಲಿವರಿ ಬಾಯ್ ಶ್ರಮಕ್ಕೆ ನೆಟ್ಟಿಗರು, ಅಮೆಜಾನ್ ಫಿದಾ- ವಿಡಿಯೋ!

ಡಾಲರ್ ಕುಸಿತದ ಮೇಲೆ ಚಿನ್ನದ ಬೆಲೆಗಳು ಹೆಚ್ಚು ವಹಿವಾಟು ನಡೆಸಿದವು ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದರು.

ABOUT THE AUTHOR

...view details