ಕರ್ನಾಟಕ

karnataka

ETV Bharat / business

ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ... - ಇಂದಿನ ಡೀಸೆಲ್ ದರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕೊನೆಯದಾಗಿ 2021ರ ಮಾರ್ಚ್ 30ರಂದು ಬದಲಾಗಿತ್ತು. ಅಂದು ಪೆಟ್ರೋಲ್ ಬೆಲೆ ಲೀಟರ್‌ಗೆ 22 ಪೈಸೆ ಮತ್ತು ಡೀಸೆಲ್ 23 ಪೈಸೆ ಕಡಿತಗೊಂಡಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 90.56 ರೂ.ಗೆ ಲಭ್ಯವಾಗುತ್ತಿದ್ದರೆ ಡೀಸೆಲ್ ಪ್ರತಿ ಲೀಟರ್‌ಗೆ 80.87 ರೂ.ಯಲ್ಲಿ ಮಾರಾಟ ಆಗುತ್ತಿದೆ.

Fuel
Fuel

By

Published : Apr 2, 2021, 3:07 PM IST

ನವದೆಹಲಿ:2021ರ ಏಪ್ರಿಲ್ 2ರ ಶುಕ್ರವಾರದಂದು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಸ್ಥಿರವಾಗಿ ಉಳಿದಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕೊನೆಯದಾಗಿ 2021ರ ಮಾರ್ಚ್ 30ರಂದು ಬದಲಾಗಿತ್ತು. ಅಂದು ಪೆಟ್ರೋಲ್ ಬೆಲೆ ಲೀಟರ್‌ಗೆ 22 ಪೈಸೆ ಮತ್ತು ಡೀಸೆಲ್ 23 ಪೈಸೆ ಕಡಿತಗೊಂಡಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 90.56 ರೂ.ಗೆ ಲಭ್ಯವಾಗುತ್ತಿದ್ದರೇ ಡೀಸೆಲ್ ಪ್ರತಿ ಲೀಟರ್‌ಗೆ 80.87 ರೂ.ಯಲ್ಲಿ ಮಾರಾಟ ಆಗುತ್ತಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ದರವನ್ನು 15 ದಿನಗಳ ಆಧಾರದ ಮೇಲೆ ಪ್ರತಿದಿನ ದರ ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಂಚ್‌ಮಾರ್ಕ್ ಇಂಧನದ ದಿನದ ಸರಾಸರಿ ಮತ್ತು ವಿದೇಶಿ ವಿನಿಮಯ ದರಗಳ ಮೇಲೆ ಆಧಾರವಾಗಿರುತ್ತದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ..! ಕೊರೊನಾ ವೈರಸ್ 2.0 ಉಲ್ಬಣ.. ಈ ರೈಲು ಸಂಚಾರ ಸ್ಥಗಿತ!

ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಮುಂಬೈಯಲ್ಲಿ ಪೆಟ್ರೋಲ್ 96.98 ರೂ., ಡೀಸೆಲ್ ಬೆಲೆ ಲೀಟರ್‌ಗೆ 87.96 ರೂ.ಯಷ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರಕು ಶುಲ್ಕ, ಸ್ಥಳೀಯ ತೆರಿಗೆ ಮತ್ತು ವ್ಯಾಟ್ ಆಧಾರದ ಮೇಲೆ ರಾಜ್ಯಗಳಿಂದ ರಾಜ್ಯಗಳಿಗೆ ಭಿನ್ನವಾಗಿರುತ್ತವೆ.

ಪ್ರಮುಖ ನಗರಗಳಲ್ಲಿ ಇಂಧನ ಚಿಲ್ಲರೆ ದರ

  • ಬೆಂಗಳೂರು: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 93.59 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 85.75 ರೂ.
  • ಚೆನ್ನೈ: ಪೆಟ್ರೋಲ್ ಬೆಲೆ- ಪ್ರತಿ ಲೀಟರ್‌ಗೆ 92.58 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 85.88 ರೂ.
  • ಕೋಲ್ಕತ್ತಾ:ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 90.77 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 83.75 ರೂ.
  • ಪುಣೆ:ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 96.62 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 86.27 ರೂ.
  • ಹೈದರಾಬಾದ್: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 94.16 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 88.20 ರೂ.
  • ನೋಯ್ಡಾ (ಯುಪಿ):ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 88.91; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 81.33 ರೂ.
  • ಮೊಹಾಲಿ (ಪಂಜಾಬ್):ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 92.45 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 83.43 ರೂ.
  • ಚಂಡೀಗಢ್:ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 87.14 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 80.57 ರೂ.
  • ಗುರುಗ್ರಾಮ್ (ಹರಿಯಾಣ): ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 88.52 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 81.45 ರೂ.

ABOUT THE AUTHOR

...view details