ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ಈ ವರ್ಷ ₹51 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ : ಮುಂದಿನ ವರ್ಷ ಇನ್ನೂ ಹೆಚ್ಚಾಗುವ ನಿರೀಕ್ಷೆ

ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ದ್ರವ್ಯತೆ, ಕೊರೊನಾ ವೈರಸ್ ಭೀತಿ, ಹೆಚ್ಚುತ್ತಿರುವ ಜಾಗತಿಕ ಹಣದುಬ್ಬರ ಹಾಗೂ ಭಾರತೀಯ ಷೇರು ಮಾರುಕಟ್ಟೆಗಳ ಹೆಚ್ಚಿನ ಮೌಲ್ಯಮಾಪನವು ವಿದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ..

FPIs' net investments cross Rs 51,000 cr in 2021; more likely in New Year
ದೇಶದ ಷೇರು ಮಾರುಕಟ್ಟೆಯಲ್ಲಿ ಈ ವರ್ಷ ₹51 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ; 2020, 2019 ಕ್ಕಿಂತ ಅತಿ ಕಡಿಮೆ

By

Published : Dec 29, 2021, 4:52 PM IST

ಮುಂಬೈ :2021ರಲ್ಲಿ ದೇಶದ ಷೇರುಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು 51,000 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದಾರೆ. ಬಂಡವಾಳ ಹೂಡಿಕೆ ಹರಿದು ಬರುತ್ತಿರುವುದರಿಂದ ಉದಯೋನ್ಮುಖ ಮಾರುಕಟ್ಟೆ ಸ್ವತ್ತುಗಳು, ವಿಶೇಷವಾಗಿ ಈಕ್ವಿಟಿಗಳು ಮುಂಬರುವ ಹಲವು ತಿಂಗಳುಗಳವರೆಗೆ ಆದ್ಯತೆಯ ಹೂಡಿಕೆಯ ಮಾರ್ಗವಾಗಿ ಉಳಿಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2021ರ ಬಹುಪಾಲು ಅವಧಿಯಲ್ಲಿ ಈಕ್ವಿಟಿಗಳು ಸೀಜ್ ಆಗುತ್ತಿದ್ದಂತೆ ಆರ್ಥಿಕತೆಯು ನಿಧಾನವಾಗಿ ಚೇತರಿಕೆಯ ಹಾದಿಗೆ ಮರಳಿದೆ. ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರಿಂದ (ಎಫ್‌ಪಿಐಗಳು) 2020ರಲ್ಲಿ 1.03 ಲಕ್ಷ ಕೋಟಿಗಳ ನಿವ್ವಳ ಒಳ ಹರಿವು ಇತ್ತು.

ಆದರೆ, ಈ ವರ್ಷ ಅತಿ ಕಡಿಮೆಯಾಗಿದೆ. 2019ಕ್ಕೆ ಹೋಲಿಸಿದರೆ 2020ರ ಅವಧಿಯಲ್ಲಿನ ಹೂಡಿಕೆಯೂ ಕಡಿಮೆಯಾಗಿದೆ. 2019ರಲ್ಲಿ 1.35 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡಲಾಗಿತ್ತು. ಜೂನ್, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸಹ ನಿವ್ವಳ ಹೂಡಿಕೆ ಮಾಡಿದ್ದಾರೆ. ಉಳಿದ ಆರು ತಿಂಗಳುಗಳು ನಿವ್ವಳ ಎಫ್‌ಪಿಐ ಹೊರ ಹರಿವಿಗೆ ಸಾಕ್ಷಿಯಾಗಿದೆ.

ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ದ್ರವ್ಯತೆ, ಕೊರೊನಾ ವೈರಸ್ ಭೀತಿ, ಹೆಚ್ಚುತ್ತಿರುವ ಜಾಗತಿಕ ಹಣದುಬ್ಬರ ಹಾಗೂ ಭಾರತೀಯ ಷೇರು ಮಾರುಕಟ್ಟೆಗಳ ಹೆಚ್ಚಿನ ಮೌಲ್ಯಮಾಪನವು ವಿದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ:ನೀವು ಹೆಚ್ಚಿನ ಆದಾಯವನ್ನು ಗಳಿಸಬೇಕೇ?.. ಇಲ್ಲಿ ಹೂಡಿಕೆ ಮಾಡಿ ಹಣ ಸಂಪಾದಿಸಿ

ABOUT THE AUTHOR

...view details