ನವದೆಹಲಿ:ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 73 ರೂ. ದಾಟಿದ್ದು, ಕಳೆದ ಹದಿನೈದು ದಿನಗಳಲ್ಲಿ 12ನೇ ಏರಿಕೆಯ ನಂತರ ಪೆಟ್ರೋಲ್ ದರ 83 ರೂ.ಯಲ್ಲಿ ಮಾರಾಟ ಆಗುತ್ತಿದೆ.
ತೈಲ ಮಾರುಕಟ್ಟೆ ಕಂಪನಿಗಳ ಇತ್ತೀಚಿನ ಬೆಲೆ ಪ್ರಕಾರ, ಪೆಟ್ರೋಲ್ ಬೆಲೆ ಶುಕ್ರವಾರ ಲೀಟರ್‌ಗೆ 20 ಪೈಸೆ ಮತ್ತು ಡೀಸೆಲ್ ದರ 23 ಪೈಸೆಯಷ್ಟು ಹೆಚ್ಚಳವಾಗಿದೆ.
ಓದಿ:ಕೋವಿಡ್ ಲಸಿಕೆ: ಸುಳ್ಳು ವದಂತಿಗಳ ಪೋಸ್ಟ್ ತೆಗೆದುಹಾಕಲಿರುವ ಫೇಸ್‌ಬುಕ್
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 82.66 ರೂ.ಯಿಂದ 82.86 ರೂ.ಗೆ ಏರಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ 72.84 ರೂ.ಗಳಿಂದ 73.07 ರೂ.ಗೆ ತಲುಪಿದೆ.
ಸುಮಾರು ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆ ಪುನರಾರಂಭಿಸಿದ್ದು, ನವೆಂಬರ್ 20ರಿಂದ 12 ಬಾರಿ ಬೆಲೆ ಹೆಚ್ಚಳವಾಗಿದೆ. 15 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 1.8 ರೂ ಮತ್ತು ಡೀಸೆಲ್ ದರ 2.61 ರೂ.ಯಷ್ಟು ಹೆಚ್ಚಳವಾಗಿದೆ.