ಕರ್ನಾಟಕ

karnataka

ETV Bharat / business

ಕಾಫಿ ಡೇ ಮಾಲೀಕ ನಿಗೂಢ ನಾಪತ್ತೆ... ಪಾತಾಳಕ್ಕಿಳಿದ ಕಂಪನಿ ಷೇರು..! - ಮಂಗಳೂರಿನಲ್ಲಿ ನಾಪತ್ತೆ

ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಕಾಫಿ ಡೇ ಷೇರು ಇಂದಿನ ವಹಿವಾಟಿನಲ್ಲಿ ದಾಖಲೆಯ ಕುಸಿತ ಕಂಡಿದೆ.

ಷೇರು

By

Published : Jul 30, 2019, 11:39 AM IST

Updated : Jul 30, 2019, 11:55 AM IST

ನವದೆಹಲಿ:ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ನಾಪತ್ತೆ ಪ್ರಕರಣ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು, ಅತ್ತ ಕಾಫಿ ಡೇ ಷೇರು ವ್ಯವಹಾರವೂ ವಿಚಲಿತವಾಗಿದೆ.

ಖ್ಯಾತ ಉದ್ಯಮಿ ನಾಪತ್ತೆ ಪ್ರಕರಣ​... ಕೇಂದ್ರದ ನೆರವು ಕೋರಿದ ಸಂಸದರು!

ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಸೋಮವಾರ ಸಂಜೆ ವೇಳೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಕಾಫಿ ಡೇ ಷೇರು ಇಂದಿನ ವಹಿವಾಟಿನಲ್ಲಿ ದಾಖಲೆಯ ಕುಸಿತ ಕಂಡಿದೆ.

ಮೋಸ ಮಾಡುವ ಉದ್ದೇಶ ಇಲ್ಲ, ನಷ್ಟಕ್ಕೆ ನಾನೇ ಕಾರಣ: ಸಿದ್ಧಾರ್ಥ್​ ಪತ್ರದ ಪೂರ್ಣ ಪಾಠ

ಕಾಫಿ ಡೇ ಎಂಟರ್​ಪ್ರೈಸಸ್​ ಶೇ.20ರಷ್ಟು ಕುಸಿತವಾಗಿದ್ದು, ಬಿಎಸ್​ಇ ಸೆನ್ಸೆಕ್ಸ್ ಶೇ.0.4ರಷ್ಟು ಇಳಿಕೆಯಾಗಿದೆ. ಸೋಮವಾರದ ದಿನದಾಂತ್ಯಕ್ಕೆ 192 ರೂಪಾಯಿ ಷೇರು ಮೌಲ್ಯ ಹೊಂದಿದ್ದ ಕಾಫಿ ಡೇ ಎಂಟರ್​ಪ್ರೈಸಸ್ ಇಂದು 38 ರೂಪಾಯಿ ಕಳೆದುಕೊಂಡು 154ರೂ. ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ಇದು ಈ ವರ್ಷದ ದಾಖಲೆಯ ಕುಸಿತವಾಗಿದೆ.

1993ರಲ್ಲಿ ವಿ.ಜಿ.ಸಿದ್ಧಾರ್ಥ ಆರಂಭಿಸಿದ ಕೆಫೆ ಕಾಫಿ ಡೇ ಹಲವಾರು ದೇಶಗಳಲ್ಲಿ ಬ್ರಾಂಚ್​​ಗಳನ್ನು ಹೊಂದಿದೆ. ಇದಲ್ಲದೇ ಇನ್ನಿತರ ಉದ್ಯಮಗಳಲ್ಲೂ ಸಿದ್ದಾರ್ಥ್​ ತಮ್ಮನ್ನು ತೊಡಗಿಸಿಕೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ಕಾಫಿ ಡೇಗೆ ಸಂಬಂಧಿಸಿದ ವ್ಯವಹಾರಗಳು ಇಂದು ಸ್ಥಗಿತ, ಕಾರ್ಮಿಕರಿಗೆ ರಜೆ

Last Updated : Jul 30, 2019, 11:55 AM IST

ABOUT THE AUTHOR

...view details