ಕರ್ನಾಟಕ

karnataka

ETV Bharat / business

ಜಿಯೋ ಪ್ರಾಬಲ್ಯಕ್ಕೆ ಏರ್​ಟೆಲ್​ ತತ್ತರ... 3G ವಿಭಾಗದಲ್ಲಿ ಬಿಎಸ್​ಎನ್​​ಎಲ್​ ಮುಂದು..! - ಜಿಯೋ 4G

ನೆಟ್‌ವರ್ಕ್ ಕಾರ್ಯಕ್ಷಮತೆ ದತ್ತಾಂಶವನ್ನು ಟ್ರಾಯ್ ರಿಲೀಸ್ ಮಾಡಿದ್ದು ಒಂದಷ್ಟು ಅಚ್ಚರಿಯ ಈ ಪಟ್ಟಿಯಲ್ಲಿದೆ. 3G ಹಾಗೂ 4G ನೆಟ್​ವರ್ಕ್ ವೇಗದ ಬಗ್ಗೆ ಟ್ರಾಯ್​ ಪಟ್ಟಿಯ ಮಾಹಿತಿ ಇಲ್ಲಿದೆ..

ನೆಟ್​ವರ್ಕ್ ಕಾರ್ಯಕ್ಷಮತೆ

By

Published : Aug 22, 2019, 9:18 AM IST

ನವದೆಹಲಿ:ಹಂತ ಹಂತವಾಗಿ ವೇಗವನ್ನು ಹೆಚ್ಚಿಸುತ್ತಾ, 3G, 4G ಮೂಲಕ ಬಳಕೆದಾರರಿಗೆ ಸಾಟಿಯಿಲ್ಲದ ವೇಗವನ್ನು ನೀಡಲು ಹವಣಿಸುತ್ತಿರುವ ಟೆಲಿಕಾಂ ಕಂಪನಿಗಳ ಸದ್ಯದ ಹಣೆಬರಹವನ್ನು ಟ್ರಾಯ್​ ಬಿಡುಗಡೆ ಮಾಡಿದೆ.

ನೆಟ್‌ವರ್ಕ್ ಕಾರ್ಯಕ್ಷಮತೆ ದತ್ತಾಂಶವನ್ನು ಟ್ರಾಯ್ ರಿಲೀಸ್ ಮಾಡಿದ್ದು ಒಂದಷ್ಟು ಅಚ್ಚರಿಯ ಈ ಪಟ್ಟಿಯಲ್ಲಿದೆ. 3G ಹಾಗೂ 4G ನೆಟ್​ವರ್ಕ್ ವೇಗದ ಬಗ್ಗೆ ಟ್ರಾಯ್​ ಪಟ್ಟಿಯ ಮಾಹಿತಿ ಇಲ್ಲಿದೆ..

ಜುಲೈ ತಿಂಗಳಾಂತ್ಯಕ್ಕೆ ಬಿಎಸ್​ಎನ್​ಎಲ್​​ 3G ವಿಭಾಗದಲ್ಲಿ ಗ್ರಾಹಕರಿಗೆ ಉಳಿದೆಲ್ಲಾ ಕಂಪನಿಗಳಿಗಿಂತ ವೇಗವನ್ನು ನೀಡಿದೆ. 2.5Mbps ವೇಗದ ಮೂಲಕ ಅಗ್ರಸ್ಥಾನದಲ್ಲಿದ್ದರೆ, 2Mbps ವೇಗದಲ್ಲಿರುವ ಐಡಿಯ ದ್ವಿತೀಯ ಸ್ಥಾನದಲ್ಲಿದೆ.

1.9Mbps ವೇಗ ನೀಡುತ್ತಿರುವ ವೊಡಾಫೋನ್​ ಮೂರನೇ ಸ್ಥಾನದಲ್ಲಿದ್ದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಏರ್​ಟೆಲ್​ 1.4Mbps ವೇಗ ನೀಡಿ ಕೊನೆಯ ಸ್ಥಾನದಲ್ಲಿದೆ.

ಮುಂದುವರೆದ ಜಿಯೋ ಪ್ರಾಬಲ್ಯ..!
ಟೆಲಿಕಾಂ ವಲಯದಲ್ಲಿ ಕ್ರಾಂತಿಕಾರಿ ನಡೆ ಅನುಸರಿಸಿ ಗ್ರಾಹಕರನ್ನು ತನ್ನೆಡೆಗೆ ಸೆಳೆದ ಜಿಯೋ 4G ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. 4G ವೇಗದಲ್ಲಿ ಜಿಯೋ ಹಿಂದಿಕ್ಕಲು ಪ್ರತಿಸ್ಫರ್ಧಿ ಕಂಪನಿಗಳಿಗೆ ಸಾಧ್ಯವಾಗಿಲ್ಲ.

ಮಾರುಕಟ್ಟೆ ಪ್ರವೇಶಿಸಿ ಕೇವಲ ಮೂರೇ ವರ್ಷ ತುಂಬಿದ್ದರೂ ಜಿಯೋ 21Mbps ವೇಗವನ್ನು ಗ್ರಾಹಕರಿಗೆ ನೀಡುತ್ತದ್ದು, ಪರಿಣಾಮ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಜಿಯೋ ಪ್ರಬಲ ಸ್ಪರ್ಧಿ ಏರ್​ಟೆಲ್(8.8Mbps) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮೂರನೇ ಸ್ಥಾನದಲ್ಲಿರುವ ವೊಡಾಫೋನ್​ 7.7Mbps ವೇಗ ನೀಡುತ್ತಿದ್ದರೆ, ಐಡಿಯಾ 6.6Mbps ವೇಗ ಹೊಂದಿದೆ.

ABOUT THE AUTHOR

...view details