ಕರ್ನಾಟಕ

karnataka

ETV Bharat / business

'0' ಸುತ್ತಿದ ದೇಶಿ ವಾಹನ ಮಾರಾಟ.. ಇತಿಹಾಸದಲ್ಲಿ ಇದೇ ಮೊದಲು

2020ರ ಏಪ್ರಿಲ್​ನಲ್ಲಿ ದೇಶಿಯ ಮಾರುಕಟ್ಟೆ ಶೂನ್ಯ ಮಾರಾಟ ಹೊಂದಿದೆ. ಬಂದರು ಮರು ಕಾರ್ಯಾಚರಣೆ ಬಳಿಕ ಈ ಕಂಪನಿಯು 632 ಯೂನಿಟ್​ಗಳನ್ನು ರಫ್ತು ಮಾಡಿತು. ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಖಾತ್ರಿಪಡಿಸಿದ ಬಳಿಕ ವಿತರಣೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

Automobile sale
ವಾಹನ ಮಾರಾಟ

By

Published : May 1, 2020, 4:17 PM IST

ನವದೆಹಲಿ :ಕೊರೊನಾ ವೈರಸ್​ ಪ್ರೇರೇಪಿತ ದೇಶವ್ಯಾಪಿ ಲಾಕ್​ಡೌನ್​ನಿಂದ ಆಟೋಮೊಬೈಲ್ ಕಂಪನಿಗಳು ಏಪ್ರಿಲ್​ ಮಾಸಿಕದಲ್ಲಿ ದೇಶಿ ಮಾರುಕಟ್ಟೆಯಲ್ಲಿ ಶೂನ್ಯ ಮಾರಾಟದ ವರದಿ ದಾಖಲಿಸಿವೆ.

ಕೊರೆನೊ ವೈರಸ್‌ ಲಾಕ್​ಡೌನ್​ನಿಂದಾಗಿ ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಂದೇ ಒಂದು ಯೂನಿಟ್​ ಮಾರಾಟ ಮಾಡಿರಲಿಲ್ಲ ಎಂದು ದೇಶದ ಅತಿ ದೊಡ್ಡಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಹೇಳಿದೆ.

2020ರ ಏಪ್ರಿಲ್​ನಲ್ಲಿ ದೇಶಿಯ ಮಾರುಕಟ್ಟೆ ಶೂನ್ಯ ಮಾರಾಟ ಹೊಂದಿದೆ. ಬಂದರು ಮರು ಕಾರ್ಯಾಚರಣೆ ಬಳಿಕಈ ಕಂಪನಿಯು 632 ಯೂನಿಟ್​ಗಳನ್ನು ರಫ್ತು ಮಾಡಿತು. ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಖಾತ್ರಿಪಡಿಸಿದ ಬಳಿಕ ವಿತರಣೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಎಂಜಿ ಮೋಟಾರ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ ಸೇರಿ ಇತರೆ ಕಂಪನಿಗಳು ಮಾರಾಟದಲ್ಲಿ ಸೊನ್ನೆ ಸುತ್ತಿವೆ. ಮಹೀಂದ್ರಾ ಅಂಡ್​ ಮಹೀಂದ್ರಾ ಸಹ ಏಪ್ರಿಲ್‌ನಲ್ಲಿ ಒಟ್ಟು ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ.83ರಷ್ಟು ಕುಸಿತ ಕಂಡಿದ್ದು, 4,772 ಯುನಿಟ್‌ ಮಾರಾಟ ಮಾಡಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು ಒಟ್ಟು 28,552 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ದೇಶಿಯ ಟ್ರಾಕ್ಟರ್ ಮಾರಾಟವು ಶೇ.83ರಷ್ಟು ಇಳಿಕೆಯಾಗಿದೆ. ಕಳೆದ ತಿಂಗಳು 4,716 ಯುನಿಟ್‌ಗಳಿಗೆ ತಲುಪಿದ್ದು, 2019ರ ಏಪ್ರಿಲ್‌ನಲ್ಲಿ 27,495 ಯುನಿಟ್ ಮಾರಾಟ ಆಗಿದ್ದವು.

ABOUT THE AUTHOR

...view details