ಕರ್ನಾಟಕ

karnataka

ETV Bharat / business

ಯುರೋಪ್‌ನಲ್ಲಿ ಕೋವಿಡ್‌ ಹೆಚ್ಚಳ ತಂದ ಸಂಕಷ್ಟ; ಏಷ್ಯಾ ಷೇರುಪೇಟೆಯಲ್ಲಿ ಮಹಾಕುಸಿತ - ಹಾಂಗ್‌ಕಾಂಗ್

ಯುರೋಪ್‌ನಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದು ಏಷ್ಯಾದ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶಾಂಘೈ, ಟೋಕಿಯೊ, ಹಾಂಕಾಂಗ್ ಹಾಗೂ ಸಿಡ್ನಿ ಮಾರುಕಟ್ಟೆಗಳು ಇಳಿಕೆಯ ಹಾದಿಯಲ್ಲಿ ಸಾಗುತ್ತಿವೆ.

Asian stock markets sink as traders watch Europe virus cases
ಯುರೋಪ್‌ನಲ್ಲಿ ಕೋವಿಡ್‌ ಹೆಚ್ಚಳ ತಂದ ಸಂಕಷ್ಟ; ಏಷ್ಯಾ ಷೇರುಪೇಟೆಯಲ್ಲಿ ತಲ್ಲಣ

By

Published : Nov 26, 2021, 11:30 AM IST

ಬೀಜಿಂಗ್(ಚೀನಾ):ಯುರೋಪ್‌ನಲ್ಲಿ ಕೋವಿಡ್‌ ಪ್ರಕರಣಗಳ ಉಲ್ಬಣ ಏಷ್ಯಾದ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸುತ್ತಿದ್ದು, ಕುಸಿತದ ಹಾದಿಯಲ್ಲಿ ವಹಿವಾಟು ಸಾಗುತ್ತಿದೆ.

Asian stock markets: ಶಾಂಘೈ, ಟೋಕಿಯೊ, ಹಾಂಕಾಂಗ್ ಹಾಗೂ ಸಿಡ್ನಿ ಷೇರುಪೇಟೆಯಲ್ಲಿ ಕುಸಿತ ಕಂಡಿವೆ. ರಜೆ ಹಿನ್ನೆಲೆಯಲ್ಲಿ ಗುರುವಾರ ಅಮೆರಿಕದ ಷೇರು ಮಾರುಕಟ್ಟೆ ವಹಿವಾಟು ನಡೆಸಿಲ್ಲ.

ಆಸ್ಟ್ರಿಯಾದಲ್ಲಿ ನಿತ್ಯ ದಾಖಲಾಗುತ್ತಿದ್ದ ಕೋವಿಡ್‌ ಸಾವುಗಳು ಮೂರು ಪಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಇಡೀ ಆಸ್ಟ್ರಿಯಾವನ್ನು 10 ದಿನಗಳ ಲಾಕ್‌ಡೌನ್ ಮಾಡಲಾಗಿದೆ. ಆದರೆ, ಇಟಲಿ ಲಸಿಕೆ ಪಡೆಯದ ಜನರಿಗೆ ಚಟುವಟಿಕೆಯಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಜರ್ಮನಿ ಹಾಗೂ ಡೆನ್ಮಾರ್ಕ್‌ಗೆ ಪ್ರಯಾಣ ಬೆಳಸದಂತೆ ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.

ಮೊರಾಕೊದಲ್ಲಿ ನಿತ್ಯದ ಕೋವಿಡ್‌ ಹೊಸ ಪ್ರಕರಣಗಳು 30,000 ಕ್ಕಿಂತ ಹೆಚ್ಚಾದ ನಂತರ ಫ್ರಾನ್ಸ್‌ನಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿದೆ. ಯುರೋಪಿನಾದ್ಯಂತ ಹೊಸ ಕೋವಿಡ್‌ ಅಲೆಯನ್ನು ವ್ಯಾಪಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಆಕ್ಟಿವ್‌ಟ್ರೇಡ್ಸ್‌ನ ಆಂಡರ್ಸನ್ ಅಲ್ವೆಸ್ ವರದಿಯಲ್ಲಿ ತಿಳಿಸಿದ್ದಾರೆ.

ಚೀನಾ ನಿರ್ಬಂಧಗಳಿಂದ ಷೇರುಪೇಟೆಯಲ್ಲಿ ತಲ್ಲಣ!

ಹಡಗು ಸಿಬ್ಬಂದಿಗೆ ಪ್ರವೇಶ ಮಿತಿಗೊಳಿಸುವ ಚೀನಾದ ನಿರ್ಬಂಧಗಳು ಜಾಗತಿಕ ವ್ಯಾಪಾರದಲ್ಲಿ ಬಿಕ್ಕಟ್ಟು ಹೆಚ್ಚಿಸುತ್ತಿವೆ ಎಂದು ಆಂಡರ್ಸನ್ ಅಲ್ವೆಸ್ ಹೇಳಿದ್ದಾರೆ. ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇ.0.4ರಷ್ಟು ಕುಸಿತ ಕಂಡ ಬಳಿಕ 3,569.86 ಅಂಶಗಳಿಗೆ ತಲುಪಿದೆ. ಟೋಕಿಯೊದಲ್ಲಿ ನಿಕ್ಕಿ 225 ಅಂಕಗಳ ಪತನದ ಬಳಿಕ 28,779ಕ್ಕೆ ಇಳಿದರೆ, ಹಾಂಕಾಂಗ್‌ನ ಹಾಂಗ್‌ ಸೆಂಗ್‌ನಲ್ಲಿ ಶೇ.1.9 ರಷ್ಟು ಕುಸಿತದ ನಂತರ 24,260.94ರಲ್ಲಿ ವಹಿವಾಟು ನಡೆಸಿದೆ.

ಸಿಯೋಲ್‌ನಲ್ಲಿನ ಕೊಸ್ಪಿ ಶೇಕಡಾ 1 ರಷ್ಟು ನಷ್ಟ ಅನುಭವಿಸಿ 2,949.71 ಕ್ಕೆ ಇಳಿದರೆ, ಸಿಡ್ನಿ ಷೇರು ಪೇಟೆಯಲ್ಲಿ 200 ಅಂಕಗಳ ಪತನದ ಬಳಿಕ 7,301.90 ಅಂಶಗಳಿಗೆ ಬಂದಿದೆ. ನ್ಯೂಜಿಲೆಂಡ್ ಹಾಗೂ ಆಗ್ನೇಯ ಏಷ್ಯಾ ಮಾರುಕಟ್ಟೆಗಳಲ್ಲೂ ಸೂಚ್ಯಂಕಗಳು ಕುಸಿತ ಕಂಡಿವೆ.

ಫೆಡರಲ್ ರಿಸರ್ವ್ ಅಧಿಕಾರಿಗಳು ಈ ವಾರ ಬಿಡುಗಡೆ ಮಾಡಿದ ತಮ್ಮ ಅಕ್ಟೋಬರ್ ಸಭೆಯ ಟಿಪ್ಪಣಿಗಳಲ್ಲಿ ಹಿಂದೆ ಯೋಜಿಸಿದ್ದಕ್ಕಿಂತ ಬೇಗ ದರಗಳನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಹಣದುಬ್ಬರಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ ಪರಿಣಾಮ ಹೂಡಿಕೆದಾರರು ಹೆಚ್ಚು ಜಾಗರೂಕರಾಗಿದ್ದಾರೆ.

ಇಂಧನ ಮಾರುಕಟ್ಟೆಗಳಲ್ಲಿ, ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್‌ಚೇಂಜ್‌ನಲ್ಲಿ ಎಲೆಕ್ಟ್ರಾನಿಕ್ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಕಚ್ಚಾ ತೈಲ 1.68 ಡಾಲರ್ ಇಳಿಕೆಯೊಂದಿಗೆ ಪ್ರತಿ ಬ್ಯಾರೆಲ್‌ಗೆ 76.71 ಡಾಲರ್‌ಗೆ ಇಳಿದಿದೆ. ಅಂತಾರಾಷ್ಟ್ರೀಯ ತೈಲಗಳ ಬೆಲೆ ಆಧಾರದಲ್ಲಿ ಲಂಡನ್‌ನಲ್ಲಿ ಪ್ರತಿ ಬ್ಯಾರೆಲ್‌ ಮೇಲೆ 1.29 ಡಾಲರ್‌ ಕಡಿಮೆಯಾಗಿ 1 ಬ್ಯಾರೆಲ್‌ 79.63 ಡಾಲರ್‌ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:ಕೋವಿಡ್‌ ಲಸಿಕೆ ಖರೀದಿ: ಭಾರತಕ್ಕೆ 11,185 ಕೋಟಿ ರೂ ಎಡಿಬಿ ಸಾಲ ಸೌಲಭ್ಯ

ABOUT THE AUTHOR

...view details