ಕರ್ನಾಟಕ

karnataka

ETV Bharat / business

ಪೆಟ್ರೋಲ್​, ಡೀಸೆಲ್​ ದರ ಏರಿಕೆ ಬೆನ್ನಲ್ಲೇ ಸೌದಿ ಕೊಟ್ಟಿತು ಮಹತ್ವದ ಭರವಸೆ.. - oil shortfall

ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಸೌದಿಯ ರಾಯಭಾರಿ ಡಾ. ಸೌದ್ ಬಿನ್​ ಮೊಹಮ್ಮದ್​ ಅಲ್ ಸತಿ ಅವರು, ಸೌದಿಯು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ತಜ್ಞರಿಗೆ ಡ್ರೋಣ್​ ದಾಳಿಯ ತನಿಖೆಯಲ್ಲಿ ಭಾಗವಹಿಸುವಂತೆ ಆಹ್ವಾನಿ ನೀಡಿದೆ. ದಾಳಿಯ ಪ್ರಾಥಮಿಕ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಭಾರತದ ಇಂಧನ ಸುರಕ್ಷತೆಯ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇತರೆ ತೈಲ ಉತ್ಪಾದಕರೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Sep 22, 2019, 9:45 PM IST

Updated : Sep 22, 2019, 10:56 PM IST

ನವದೆಹಲಿ: ಡ್ರೋಣ್​ ದಾಳಿಯ ಬಳಿಕ ಭಾರತದೊಂದಿಗೆ ಉಂಟಾದ ಇಂಧನ ಪೂರೈಕೆಯ ವ್ಯತ್ಯಯವನ್ನು ಸರಿದುಗಿಸಲು ಸೌದಿ ಬದ್ಧವಾಗಿದ್ದು, ನಾವು ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಭಾರತಕ್ಕೆ ನೀಡಿದೆ.

ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಸೌದಿಯ ರಾಯಭಾರಿ ಡಾ. ಸೌದ್ ಬಿನ್​ ಮೊಹಮ್ಮದ್​ ಅಲ್ ಸತಿ ಅವರು, ಸೌದಿಯು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ತಜ್ಞರಿಗೆ ಡ್ರೋಣ್​ ದಾಳಿಯ ತನಿಖೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದೇವೆ. ದಾಳಿಯ ಪ್ರಾಥಮಿಕ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಭಾರತದ ಇಂಧನ ಸುರಕ್ಷತೆಯ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇತರೆ ತೈಲ ಉತ್ಪಾದಕರೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತ ಇರಾನ್​ನಿಂದ ತೈಲ ಆಮದು ಸ್ಥಗಿತಗೊಳಿಸಿದ ಬಳಿಕ ಇದನ್ನು ತಡೆಯಲು ದಾಳಿ ಮಾಡಿತ್ತೆ ಎಂದು ಪ್ರಶ್ನಿಸಿದಾಗ, ರಾಯಭಾರಿ ದೇಶವು ಭಾರತದ ಇಂಧನ ಸುರಕ್ಷತೆಗೆ ಬದ್ಧವಾಗಿದೆ. ಇತರೆ ಮೂಲಗಳಿಂದ ಉಂಟಾಗುವ ಅಡೆತಡೆಗಳನ್ನು ಎದುರಿಸಿ ಯಾವುದೇ ಕೊರತೆ ಬಾರದಂತೆ ಮುನ್ನಡೆಯುತ್ತಿವೆ ಎಂದು ನಯವಾಗಿ ಉತ್ತರಿಸಿದರು.ಸೌದಿ ಅರೇಬಿಯಾವು ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯಹೊಂದಿದೆ. ಇಂತಹ ಆಕ್ರಮಣಗಳಿಗೆ ಬಲವಾಗಿ ತಿರುಗೇಟು ನೀಡುವ ಸಂಕಲ್ಪ ಹೊಂದಿದೆ. ದಾಳಿಯ ಬಳಿಕ ಭಾರತದ ನೀಡಿದ ಬೆಂಬಲ ಮತ್ತು ಒಗ್ಗಟ್ಟನ್ನು ಶ್ಲಾಘಿಸಿದರು.

Last Updated : Sep 22, 2019, 10:56 PM IST

ABOUT THE AUTHOR

...view details