ನವದೆಹಲಿ :ಸತತ ಎರಡು ದಿನಗಳ ತೀವ್ರ ಏರಿಕೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು (ಶನಿವಾರ) ಯಥಾಸ್ಥಿತಿ ಕಾಯ್ದುಕೊಂಡಿದೆ. ಜಾಗತಿಕ ಕಚ್ಚಾ ಬೆಲೆಗಳು ಶೇ .1ರಷ್ಟು ಏರಿಕೆಯಾಗಿದೆ. ಈ ವರ್ಷದ ಗರಿಷ್ಠ ಮಟ್ಟವಾಗಿ ಪ್ರತಿ ಬ್ಯಾರೆಲ್‌ಗೆ 60 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 30 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 86.95 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 77.13 ರೂ.ಯಲ್ಲಿದ್ದವು. ಇಂದು ಇದೇ ದರದಲ್ಲಿ ಮಾರಾಟ ಆಗುತ್ತಿವೆ.
ದೆಹಲಿ ಹೊರತಾಗಿ ಇತರ ಮಹಾನಗರಗಳಲ್ಲಿಯೂ ಇಂಧನ ದರ ಜಿಗಿದಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 93.49 ರೂ. ಇದ್ದರೆ, ಚೆನ್ನೈನಲ್ಲಿ 30 ಪೈಸೆ ಹೆಚ್ಚಳದ ನಂತರ 89.39 ರೂ.ಗೆ ತಲುಪಿದೆ.