ನವದೆಹಲಿ: ಭಾರತಕ್ಕೆ ಸಲ್ಲಬೇಕಾಗಿರುವ ₹ 42,500 ಕೋಟಿಯಷ್ಟು (6 ಬಿಲಿಯನ್ ಡಾಲರ್) ಸಾಲದ ಧನಸಹಾಯ ಯಥಾವತ್ತಾಗಿ ಮುಂದುವರಿಯಲಿದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು ಭರವಸೆ ನೀಡಿದ್ದಾರೆ.
ಮೋದಿ ಸರ್ಕಾರಕ್ಕೆ ವಿಶ್ವ ಬ್ಯಾಂಕ್ನಿಂದ ₹42,500 ಕೋಟಿಯ ದೀಪಾವಳಿ ಸಿಹಿ.. - PM Narendra Modi
ವಿಶ್ವ ಬ್ಯಾಂಕ್ನ ಸಾಲದ ನೆರವಿನಿಂದ ಪ್ರಸ್ತುತ 97 ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. 'ವಿಶ್ವಬ್ಯಾಂಕ್ 97 ಯೋಜನೆಗಳಿಗೆ 24 ಬಿಲಿಯನ್ ಡಾಲರ್ ನೆರವು ನೀಡಲು ಬದ್ಧವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಯೋಜನೆಗಳು ಮತ್ತು ಸುಧಾರಣೆಗಳು ಭವಿಷ್ಯದಲ್ಲಿ ಪ್ರತಿಬಿಂಬಿಸಲಿವೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ವರ್ಷಕ್ಕೆ 5ರಿಂದ 6 ಬಿಲಿಯನ್ ಡಾಲರ್ ಸಾಲದ ಸಹಾಯಧನ ಸಿಗಲಿದೆ ಎಂದು ಮಾಧ್ಯಮ ಸಂವಾದದಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದರು.
ವಿಶ್ವ ಬ್ಯಾಂಕ್ನ ಸಾಲದ ನೆರವಿನಿಂದ ಪ್ರಸ್ತುತ 97 ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. 'ವಿಶ್ವಬ್ಯಾಂಕ್ 97 ಯೋಜನೆಗಳಿಗೆ 24 ಬಿಲಿಯನ್ ಡಾಲರ್ ನೆರವು ನೀಡಲು ಬದ್ಧವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಯೋಜನೆಗಳು ಮತ್ತು ಸುಧಾರಣೆಗಳು ಭವಿಷ್ಯದಲ್ಲಿ ಪ್ರತಿಬಿಂಬಿಸಲಿವೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ವರ್ಷಕ್ಕೆ 5ರಿಂದ 6 ಬಿಲಿಯನ್ ಡಾಲರ್ ಸಾಲದ ಸಹಾಯಧನ ಸಿಗಲಿದೆ ಎಂದು ಮಾಧ್ಯಮ ಸಂವಾದದಲ್ಲಿ ಹೇಳಿದರು.
ಇಂದು ವಿಶ್ವ ಬ್ಯಾಂಕ್ನ ಸಂದರ್ಶಕ ಮುಖ್ಯಸ್ಥರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಹ ಭೇಟಿ ಮಾಡಿದರು. ಭೇಟಿಯ ಬಳಿಕ ಮಾಲ್ಪಾಸ್ ಅವರು, 'ಮೂಲಸೌಕರ್ಯ ಕ್ಷೇತ್ರಕ್ಕೆ ಹಣದ ನೆರವು, ವಿತ್ತೀಯ ವಲಯದ ಬಲವರ್ಧನೆ, ಪ್ರಾದೇಶಿಕ ಸಂಪರ್ಕ ಮತ್ತು ನಾಗರಿಕ ಸೇವೆಗಳ ಸುಧಾರಣೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ಹೇಳಿದರು.