ಕರ್ನಾಟಕ

karnataka

ETV Bharat / business

ಸಂಕಷ್ಟದ ಸುಳಿಯಲ್ಲಿರುವ ವಲಯಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ: ನಿರ್ಮಲಾ ಸೀತಾರಾಮನ್​

ಸುದ್ದಿಗೋಷ್ಠಿಲ್ಲಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು, ಸಾಧ್ಯವಿರುವ ಎಲ್ಲ ನೆರವನ್ನು ಉದ್ಯಮಗಳಿಗೆ ನೀಡಲಾಗುವುದು. ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸುತ್ತಿದ್ದೇವೆ. ಆ ಎಲ್ಲ ಸವಾಲುಗಳಿಗೆ ಸ್ಪಂದಿಸಿ ಸಾಧ್ಯವಿರುವ ರೀತಿಯಲ್ಲಿ ಸಹಾಯ ಮಾಡುತ್ತೇವೆ. ಸಮಸ್ಯೆಗಳಡಿ ಸಿಲುಕಿರುವ ಕ್ಷೇತ್ರಗಳೊಂದಿಗೆ ನಿರಂತರವಾಗಿ ಸಪರ್ಕದಲ್ಲಿದ್ದೇವೆ ಎಂದರು.

ಸಾಂದರ್ಭಿಕ ಚಿತ್ರ

By

Published : Sep 7, 2019, 10:26 AM IST

ಕೋಲ್ಕತ್ತಾ: ಎಲ್ಲ ವಲಯಗಳು ಎದುರಿಸುತ್ತಿರುವ ಸವಾಲುಗಳಿಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಠಿಲ್ಲಿ ಮಾತನಾಡಿದ ಅವರು, ಸಾಧ್ಯವಿರುವ ಎಲ್ಲ ನೆರವನ್ನು ಉದ್ಯಮಗಳಿಗೆ ನೀಡಲಾಗುವುದು. ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸುತ್ತಿದ್ದೇವೆ. ಆ ಎಲ್ಲ ಸವಾಲುಗಳಿಗೆ ಸ್ಪಂದಿಸಿ ಸಾಧ್ಯವಿರುವ ರೀತಿಯಲ್ಲಿ ಸಹಾಯ ಮಾಡುತ್ತೇವೆ. ಸಮಸ್ಯೆಗಳಡಿ ಸಿಲುಕಿರುವ ಕ್ಷೇತ್ರಗಳೊಂದಿಗೆ ನಿರಂತರವಾಗಿ ಸಪರ್ಕದಲ್ಲಿದ್ದೇವೆ ಎಂದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ಸಂಗ್ರಹದ ಗುರಿಯನ್ನು ಸಿಬಿಡಿಟಿ ಮತ್ತು ಸಿಬಿಐಸಿ ಅಧಿಕಾರಿಗಳಿಗೆ ನೀಡಿದ್ದೇವೆ. ಸರಿಯಾದ ಪರಿಗಣನೆ ಮತ್ತು ಸಮಾಲೋಚನೆಯ ಬಳಿಕವೇ ಆದಾಯ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಆದಾಯ ಸಂಗ್ರಹಣೆ ಕಡಿಮೆಯಾದರೇ ಕೇಂದ್ರ ಸರ್ಕಾರವು ಈ ಬಗ್ಗೆ ಪರಿಶೀಲನೆ ನಡೆಸಲಿದೆ. ಆದರೆ, ಸಾಮಾಜಿಕ ವಲಯಗಳ ಖರ್ಚಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್‌ಬಿಐ) ಸರ್ಕಾರಕ್ಕೆ ಬಂದ ಹೆಚ್ಚುವರಿ ನಿಧಿ ಹೇಗೆ ಬಳಸುವುದು ಎಂಬುದರ ಕುರಿತು ಕೇಂದ್ರವು ಈಗಿನವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸೀತಾರಾಮನ್ ತಿಳಿಸಿದರು.

ABOUT THE AUTHOR

...view details