ನವದೆಹಲಿ:ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಬಗ್ಗೆ ವಾಟ್ಸ್ಆ್ಯಪ್ ಬಳಕೆದಾರರು ಭಯಪಡಬೇಕಾಗಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪ್ಲಾಟ್‌ಫಾರ್ಮ್‌ಗಳ ದುರುಪಯೋಗ ಮತ್ತು ನಿಂದನೆ ತಡೆಗಟ್ಟಲು ತಿದ್ದುಪಡಿ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಬಳಕೆದಾರರಿಗೆ ಕುಂದು ಕೊರತೆ ಪರಿಹಾರಕ್ಕಾಗಿ ಸದೃಢವಾದ ವೇದಿಕೆ ನೀಡುತ್ತದೆ ಎಂದರು.
ಪ್ರಶ್ನೆಗಳನ್ನು ಕೇಳುವ ಹಕ್ಕು ಸೇರಿದಂತೆ ಟೀಕೆಗಳನ್ನು ಸರ್ಕಾರ ಸ್ವಾಗತಿಸುತ್ತದೆ. ನಿಯಮಗಳು ಸಾಮಾಜಿಕ ಮಾಧ್ಯಮದ ಸಾಮಾನ್ಯ ಬಳಕೆದಾರರು ದುರುಪಯೋಗ ಮತ್ತು ನಿಂದನೆಗೆ ಬಲಿಯಾದಾಗ ಮಾತ್ರ ಅವರಿಗೆ ಅಧಿಕಾರ ನೀಡುತ್ತವೆ ಎಂದು ಪ್ರಸಾದ್ ಅವರು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ಇಂಧನ ಬೆಲೆ ಏರಿಕೆ... ಬೆಂಗಳೂರಲ್ಲಿ ಇಷ್ಟಿದೆ ಪೆಟ್ರೋಲ್, ಡೀಸೆಲ್ ದರ!
ಗೌಪ್ಯತೆಯ ಹಕ್ಕನ್ನು ಸರ್ಕಾರ ಸಂಪೂರ್ಣವಾಗಿ ಗುರುತಿಸುತ್ತದೆ ಮತ್ತು ಗೌರವಿಸುತ್ತದೆ. WhatsApp ಸಾಮಾನ್ಯ ಬಳಕೆದಾರರು ಹೊಸ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ. ನಿಯಮಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅಪರಾಧಗಳನ್ನು ನಿಯೋಜಿಸಲು ಕಾರಣವಾದ ಸಂದೇಶವನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ಕಂಡುಹಿಡಿಯುವುದು ಇದರ ಸಂಪೂರ್ಣ ಉದ್ದೇಶವಾಗಿದೆ ಎಂದು ಪ್ರಸಾದ್ ಹೇಳಿದರು.
ಹೊಸ ಐಟಿ ನಿಯಮಗಳಿಗೆ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತ ಮೂಲದ ಕುಂದು ಕೊರತೆ ಪರಿಹಾರ ಅಧಿಕಾರಿ, ಅನುಸರಣೆ ಅಧಿಕಾರಿ ಮತ್ತು ನೋಡಲ್ ಅಧಿಕಾರಿಯನ್ನು ನೇಮಿಸುವ ಅಗತ್ಯವಿರುತ್ತದೆ. ಇದರಿಂದಾಗಿ ಕುಂದುಕೊರತೆ ಹೊಂದಿರುವ ಸಾಮಾಜಿಕ ಮಾಧ್ಯಮಗಳ ಲಕ್ಷಾಂತರ ಬಳಕೆದಾರರು ಅದರ ಪರಿಹಾರಕ್ಕಾಗಿ ಒಂದು ವೇದಿಕೆ ಪಡೆಯುತ್ತಾರೆ ಎಂದರು.