ದೆಹಲಿಯಲ್ಲಿ ಇತ್ತೀಚೆಗೆ ನಡೆದ ಎರಡನೇ 'ಅಮೆರಿಕ–ಭಾರತ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆ' (ಯುಎಸ್ಐಎಸ್‌ಪಿಎಫ್) ಶೃಂಗಸಭೆಯನ್ನು ಅಧ್ಯಕ್ಷ/ ಸಿಇಒ ಮುಖೇಶ್ ಅಘಿ ನಡೆಸಿಕೊಟ್ಟರು. ಈ ವೇಳೆ 'ಈ-ಟಿವಿ ಭಾರತ್'ಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಅಘಿ, 'ಉಭಯ ರಾಷ್ಟ್ರಗಳ ನಡುವಿನ ಸೀಮಿತ ವ್ಯಾಪಾರ ಒಪ್ಪಂದವು ಶೀಘ್ರದಲ್ಲೇ ಅಂಗೀಕೃತಗೊಳ್ಳಲಿದೆ. ಕಾಶ್ಮೀರದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬಂದರೆ ಅಮೆರಿಕದ ಹಲವು ಕಂಪನಿಗಳು ತಮ್ಮ ಬಂಡವಾಳ ಹೂಡಿಕೆ ಮಾಡಲು ಸಜ್ಜಾಗಿವೆ. ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಮೋದಿ ಭಾರತದಲ್ಲಿ ಹೂಡಿಕೆಯ ಅವಕಾಶಗಳ ಬಗ್ಗೆ ಅಲ್ಲಿನ ಉದ್ಯಮಿಗಳಿಗೆ ಭಾರತ ಮನವರಿಕೆ ಮಾಡಿಕೊಟ್ಟಿದೆ. ಹ್ಯೂಸ್ಟನ್‌ನಲ್ಲಿನ 'ಹೌಡಿ ಮೋದಿ' ಸಮಾವೇಶದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಪರ ರಾಜಕೀಯವಾಗಿ ಧ್ವನಿಗೂಡಿಸಲ್ಲ' ಎಂದು ಸ್ಪಷ್ಟನೆ ನೀಡುತ್ತಾ ಇಂಡೋ- ಅಮೆರಿಕ ನಡುವಿನ ಭವಿಷ್ಯದ ವ್ಯಾಪಾರಗಳ ಬಗ್ಗೆ ಅಘಿ ವಿವರಿಸಿದರು.
ಇಂಡೋ- ಅಮೆರಿಕ ವ್ಯಾಪಾರದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾತನಾಡಿದ ಅಘಿ, ನೀವು ವ್ಯಾಪಾರ ಒಪ್ಪಂದವನ್ನು ಉಭಯ ದೇಶಗಳ ನಡುವಿನ ವ್ಯಾಪಾರದಿಂದ ಬೇರ್ಪಡಿಸಬೇಕು. ಈ ವರ್ಷ ವ್ಯಾಪಾರದ ಗಾತ್ರ 142 ಬಿಲಿಯನ್ ಡಾಲರ್ನಿಂದ 160 ಬಿಲಿಯನ್ ಡಾಲರ್ಗೆ ಬೆಳೆಯಲಿದೆ ಎಂಬ ನಿರೀಕ್ಷೆ ಇದೆ. ಕಳೆದ ತ್ರೈಮಾಸಿಕದಲ್ಲಿ ಅಮೆರಿಕದಿಂದ ಭಾರತಕ್ಕೆ ರಫ್ತಾದ ಪ್ರಮಾಣ ಶೇ 30ರಷ್ಟು ಏರಿಕೆಯಾಗಿದೆ. ಒಟ್ಟಾರೆ ವ್ಯಾಪಾರದಲ್ಲಿ ಶೇ 16ರಷ್ಟು ಹೆಚ್ಚಳ ಕಂಡುಬಂದಿದೆ. ನೀವು ಭಾರತದಲ್ಲಿನ ಅಮೆರಿಕದ ಕಂಪನಿಗಳ ಜೊತೆಗೆ ವಹಿವಾಟಿನ ಬಗ್ಗೆ ಮಾತನಾಡಿದರೆ ಅವುಗಳಲ್ಲಿ ಹೆಚ್ಚಿನವು ಎರಡು ಅಂಕಿಗಳ ಬೆಳವಣಿಗೆ ತೋರಿಸುತ್ತಿವೆ. ಒಟ್ಟಾರೆಯ ವ್ಯಾಪಾರ- ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ನಾವು ಈಗ ಮಾಡಬೇಕಾಗಿರುವುದು ವ್ಯಾಪಾರ ಒಪ್ಪಂದವನ್ನು ಇನ್ನೂ ಸದೃಢವಾಗಿ ಕಟ್ಟಬೇಕಿದೆ. ಈಗ ನಮ್ಮ ನಡುವಿನ ಅಂತರ ತುಂಬಾ ಚಿಕ್ಕದಾಗಿದೆ ಎಂಬಂತೆ ನಾನು ಅರ್ಥಮಾಡಿಕೊಂಡಂತೆ ಅವರೂ ತೀರ್ಮಾನಕ್ಕೆ ಬರುತ್ತಾರೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳೊಳಗೆ ನಾವು ಒಪ್ಪಂದ ಮಾಡಿಕೊಳ್ಳಬೇಕು.
ಯುಎಸ್ಐಎಸ್‌ಪಿಎಫ್ ಶೃಂಗದಲ್ಲಿ ಕೇಂದ್ರ ಪಿಯೂಷ್ ಗೋಯಲ್ ಮತ್ತು ಡಾ.ಎಸ್. ಜೈಶಂಕರ್ ನೀಡಿದ ವ್ಯಾಪಾರ ಒಪ್ಪಂದದ ಭರವಸೆಗಳ ಕುರಿತು ಒಂದಿಷ್ಟು ಮಾಹಿತಿಯನ್ನು ಅಘಿ ತೆರೆದಿಟ್ಟರು. ನಮ್ಮ ನಡುವೆ ಕೆಲವು ಕೆಂಪು ರೇಖೆಗಳಿವೆ. ಸ್ಟಂಟ್, ಮೊಣಕಾಲಿನ ಕ್ಯಾಪ್ನಂತಹ ಸರಕುಗಳಲ್ಲಿ ಭಾರತ ಕೆಂಪು ರೇಖೆಗಳನ್ನು ಹೊಂದಿದೆ. ಇವುಗಳ ಜೊತೆಗೆ ಸೇಬು ಮತ್ತು ಬಾದಾಮಿಯಂತಹ ತೋಟಗಾರಿಕಾ ಉತ್ಪನ್ನ ಹಾಗೂ ಸರಕುಗಳ ರಫ್ತು ಮಾಡಲು ಅಮೆರಿಕದಲ್ಲಿ ಸಹ ಕೆಲ ಅಡ್ಡಿಗಳಿವೆ. ಅವರು ಇದಕ್ಕೆ ಸರಿಯಾದ ಸಮತೋಲಿತ ಮಾರ್ಗ ಕಂಡುಕೊಳ್ಳಬೇಕು. ಪಿಯುಷ್ ಗೋಯಲ್ ಮತ್ತು ಜೈಶಂಕರ್ ಅವರು, ಎರಡೂ ಕಡೆಗಳಲ್ಲಿನ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಅಮೆರಿಕ- ಚೀನಾ ನಡುವಿನ ವ್ಯಾಪಾರ ಸಮರದಿಂದ ಭಾರತಕ್ಕೆ ಲಾಭವಾಗಲಿದೆ ಎಂಬ ಪ್ರಶ್ನೆಗೆ ತಮ್ಮದೇ ಆದ ಶೈಲಿಯಲ್ಲಿ ಉತ್ತರ ಕೊಟ್ಟ ಅಘಿ, ತೆರಿಗೆ ಹೊರೆ ಕಡಿಮೆ ಮಾಡುವ ಮೂಲಕ ಭಾರತ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ತಿಂಗಳಾಂತ್ಯದ ಒಳಗೆ ಭಾರತದಲ್ಲಿ ಹೊಸ ಉತ್ಪಾದನೆ ಆರಂಭಿಸುವವರಿಗೆ ಶೇ 17 ಪ್ರತಿಶತದಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ಕಾರ್ಮಿಕರ ಹಾಗೂ ಭೂ ಸುಧಾರಣೆಗಳ ವಿಷಯದಲ್ಲಿ ಭಾರತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಾಗಿದೆ. ಆದರೆ, ನಾವು ಎದುರು ನೋಡುತ್ತಿರುವುದು ಅಮೆರಿಕದ ಕಂಪನಿಗಳನ್ನು. ಅವುಗಳಲ್ಲಿ ಸುಮಾರು 200 ಕಂಪನಿಗಳು ಚೀನಾ ನಂತರ ತಮ್ಮ ಕಾರ್ಯತಂತ್ರ ಆರಂಭಿಸಲು ಭಾರತವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿವೆ. ನಮ್ಮ ವಿಶ್ಲೇಷಣೆಯಲ್ಲಿ ನಾವು ನೋಡುವುದಾದರೇ ಸುಮಾರು 21 ಬಿಲಿಯನ್ ಡಾಲರ್ ಮೌಲ್ಯದಷ್ಟು ಹೂಡಿಕೆ ಮಾಡುವ ಕಂಪನಿಗಳು, ತಮ್ಮ ಉತ್ಪಾದನೆಗಾಗಿ ಭಾರತಕ್ಕೆ ವಲಸೆ ಬರಲಿವೆ. ಭಾರತದಲ್ಲಿನ ಕೇವಲ ಉತ್ಪಾದನಾ ವಾತಾವರಣ ಮೆಚ್ಚಿ ಬರುತ್ತಿಲ್ಲ. ಚೀನಾದ ನಿಧಾನಗತಿಯ ಆರ್ಥಿಕತೆ ಅಥವಾ ಅಮೆರಿಕ ಕಂಪನಿಗಳಿಗೆ ಅಲ್ಲಿನ ಬಾಗಿಲು ಮುಚ್ಚಿಕೊಳ್ಳಲಿದೆ ಎಂಬ ಆತಂಕಕ್ಕೆ ಬದಲಿ ಮಾರುಕಟ್ಟೆಯಾಗಿ ಬರುತ್ತಿವೆ ಎಂಬುದು ನನ್ನ ಭಾವನೆ. ವ್ಯವಹಾರಿಕ ದೃಷ್ಟಿಯಿಂದ ನಾವು ಉತ್ಪಾದನೆಯತ್ತ ಹೊರಳಿದರೇ ಭಾರತಕ್ಕೆ ಹೆಚ್ಚಿನ ವೇಗದ ಆರ್ಥಿಕತೆ ಬರಲಿದೆ ಎಂಬುದು ನನ್ನ ಅನಿಸಿಕೆ.