ಕರ್ನಾಟಕ

karnataka

ETV Bharat / business

ನಡು ರೋಡಲ್ಲಿ ಲಂಚದ ರೌದ್ರ ನರ್ತನ... ರಾಜ್ಯ ಬಜೆಟ್​ನಷ್ಟಿದೆ ಟ್ರಕ್​ ಮಾಲೀಕರ ಲಂಚ ಪಾವತಿ!

'ಸ್ಟೇಟಸ್ ಆಫ್ ಟ್ರಕ್ ಡ್ರೈವರ್ಸ್ ಇನ್ ಇಂಡಿಯಾ' ವರದಿಯ ಪ್ರಕಾರ, ದೆಹಲಿಯಲ್ಲಿ ರೌಂಡ್ ಟ್ರಿಪ್​ ವೇಳೆ ಟ್ರಕ್ ಚಾಲಕರು ಪಾವತಿಸಿದ ಸರಾಸರಿ ಮೊತ್ತ 557 ರೂ. ಇದೆ. ಮುಂಬೈಯಲ್ಲಿ ಇದರ ಪ್ರಮಾಣ 1,135 ರೂ.ಯಷ್ಟಿದೆ. ಗುವಾಹಟಿ ಮತ್ತು ಜೈಪುರಗಳ ಟ್ರಕ್ ಮಾಲೀಕರು 1,608 ರೂ. ಮತ್ತು 1,125 ರೂ. ಲಂಚವನ್ನು ಅಧಿಕಾರಿಗಳಿಗೆ ನೀಡುತ್ತಿದ್ದಾರೆ.

By

Published : Feb 29, 2020, 11:09 PM IST

Bribe
ಲಂಚ

ನವದೆಹಲಿ:ಭಾರತದ ಟ್ರಕ್ ಚಾಲಕರು ವಾರ್ಷಿಕವಾಗಿ 47,345 ಕೋಟಿ ರೂ.ಯಷ್ಟು ಲಂಚದ ಹಣವನ್ನ ಸಂಚಾರ ಮತ್ತು ಹೆದ್ದಾರಿ ಅಧಿಕಾರಿಗಳಿಗೆ ನೀಡುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.

ನಗರಗಳಲ್ಲಿ ಗುವಾಹಟಿ ಅತ್ಯಂತ ಕೆಟ್ಟ ವಾತಾವರಣವಿದ್ದು, ಅಲ್ಲಿ ಶೇ 97.5 ರಷ್ಟು ಚಾಲಕರು ಲಂಚ ನೀಡಿದ್ದಾರೆ. ಚೆನ್ನೈನಲ್ಲಿ 89 ಪ್ರತಿಶತ ಟ್ರಕ್ ಚಾಲಕರು ಮತ್ತು ದೆಹಲಿಯಲ್ಲಿ ಶೇ 84ರಷ್ಟು ಜನರು ರಸ್ತೆ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಸೇವ್ಲೈಫ್ ನಡೆಸಿದ ಅಧ್ಯಯನಯೊಂದು ಹೇಳಿದೆ.

'ಸ್ಟೇಟಸ್ ಆಫ್ ಟ್ರಕ್ ಡ್ರೈವರ್ಸ್ ಇನ್ ಇಂಡಿಯಾ' ವರದಿಯ ಪ್ರಕಾರ, ದೆಹಲಿಯಲ್ಲಿ ರೌಂಡ್ ಟ್ರಿಪ್​ ವೇಳೆ ಟ್ರಕ್ ಚಾಲಕರು ಪಾವತಿಸಿದ ಸರಾಸರಿ ಮೊತ್ತ 557 ರೂ. ಇದೆ. ಮುಂಬೈಯಲ್ಲಿ ಇದರ ಪ್ರಮಾಣ 1,135 ರೂ.ಯಷ್ಟಿದೆ. ಗುವಾಹಟಿ ಮತ್ತು ಜೈಪುರಗಳ ಟ್ರಕ್ ಮಾಲೀಕರು 1,608 ರೂ. ಮತ್ತು 1,125 ರೂ. ಲಂಚವನ್ನು ಅಧಿಕಾರಿಗಳಿಗೆ ನೀಡುತ್ತಿದ್ದಾರೆ.

ಕೇವಲ ಸಂಚಾರ ಮತ್ತು ಹೆದ್ದಾರಿ ಅಧಿಕಾರಿಗಳಲ್ಲದೇ ಹಲವು ಟ್ರಕ್ ಚಾಲಕರು ಆರ್‌ಟಿಒ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ. ಸುಮಾರು 44 ಪ್ರತಿಶತದಷ್ಟು ಟ್ರಕ್ ಚಾಲಕರು ಆರ್‌ಟಿಒ ಅಧಿಕಾರಿಗಳಿಗೆ ಲಂಚ ನೀಡಿದ್ದು ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ABOUT THE AUTHOR

...view details