ನವದೆಹಲಿ:ಮೊಬೈಲ್ ಫೋನ್ ಬಳಕೆದಾರರು ತಮಗಿಷ್ಟವಾದ ಟೆಲಿಕಾಂ ಆಪರೇಟರ್ಗಳಿಗೆ ಬದಲಾಗಿ, ತಮ್ಮ ಹಳೆಯ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳುವ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್ಪಿ) ಸೇವೆಯಲ್ಲಿ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಕೆಲ ಬದಲಾವಣೆಗಳನ್ನು ತಂದಿದೆ.
ಎಂಎನ್ಪಿ ನಿಯಮಗಳನ್ನು ಪರಿಷ್ಕರಿಸಿದ ಟ್ರಾಯ್, ಸೇವಾ ಪ್ರಕ್ರಿಯೆಯನ್ನು ವೇಗಗೊಳಿಸಿ ಇನ್ನಷ್ಟು ಸರಳೀಕರಣಗೊಳಿಸಿದೆ. ಪೋರ್ಟ್ ಔಟ್ ವಿನಂತಿಗೆ 3 ಕೆಲಸದ ದಿನಗಳ ಗಡುವು ನಿಗದಿಪಡಿಸಿದೆ. ಅದೇ ರೀತಿಯಾಗಿ 5 ಕೆಲಸದ ದಿನಗಳನ್ನು ಆಂತರಿಕ ಸೇವಾ ಪ್ರಕ್ರಿಯೆಗೆ ನೀಡಿದೆ. ನೂತನ ಪರಿಷ್ಕೃತ ನಿಯಮಗಳು ಡಿಸೆಂಬರ್ 16ರಿಂದ ಜಾರಿಗೆ ಬರಲಿದೆ.